ಬೆಂಗಳೂರು/ದಾವಣಗೆರೆ : ಇವತ್ತು ಸ್ಯಾಂಡಲ್‍ವುಡ್‍ನ ರಾಜರತ್ನ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 42ನೇ ಜನ್ಮದಿನ. ರಾತ್ರಿಯಿಂದಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅಪ್ಪು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. ದೊಡ್ಮನೆ ಹುಡುಗನ ಹುಟ್ಟುಹಬ್ಬದ ಖುಷಿಯಲ್ಲಿ ರಾಜಕುಮಾರ ಚಿತ್ರತಂಡ ಚಿತ್ರದ ಸಾಂಗ್ ಟೀಸರ್‍ವೊಂದನ್ನು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಿದೆ.ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದೆ. ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿಯ ಆಸೆ. Sign in to your account
Username or Email Address


Password

 Remember Me


