ತುಮಕೂರು: ಖಾಸಗಿ ಬಸ್ ಚಾಲಕನಿಗೆ ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.56 ವರ್ಷದ ನಾಗರಾಜ್ ಬಸ್‍ನಲ್ಲೇ ಸಾವನ್ನಪ್ಪಿದ ಚಾಲಕ. ತುಮಕೂರಿನ ಶಿರಾ ತಾಲೂಕಿನ ಬರಗೂರು ಬಳಿಯ ಲಕ್ಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಆಂಧ್ರದ ಅಮರಾಪುರದಿಂದ ಶಿರಾ ಮೂಲಕ ತುಮಕೂರಿಗೆ ಬರುತ್ತಿದ್ದ ಬಸ್‍ನಲ್ಲಿ ಚಾಲಕ ನಾಗರಾಜ್‍ಗೆ ಹೃದಯಾಘಾತವಾದ್ದರಿಂದ ಬಸ್ ಹಳ್ಳಕ್ಕೆ ನುಗ್ಗಿದೆ. ಈ ವೇಳೆ ಬಸ್‍ನಲ್ಲಿದ್ದ ಕ್ಲೀನರ್ ಮಾರುತಿ ಓಡಿಬಂದು ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತವಾಗೋದು ತಪ್ಪಿದೆ.ಕ್ಲೀನರ್ ಮಾರುತಿ ಸಮಯ ಪ್ರಜ್ಞೆಯಿಂದ ಬಸ್‍ನಲ್ಲಿದ್ದ 30 ಜನ ಪ್ರಯಾಣಿಕರು ಪಾರಾಗಿದ್ದಾರೆ.Sign in to your account
Username or Email Address


Password

 Remember Me


