ಬೆಂಗಳೂರು: ಕನ್ನಡದ ವಿರುದ್ಧ ಕ್ಯಾತೆ ತೆಗೆದ ದೆಹಲಿ ಮೂಲದ ಐಎಎಸ್ ಅಧಿಕಾರಿ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದೆ.ಸಾರ್ವಜನಿಕ ಉದ್ದಿಮೆಗಳ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣಾ ಕನ್ನಡದಲ್ಲಿ ಫೈಲ್ ಕೊಟ್ಟರೆ ವಾಪಸ್ಸು ಕಳಸ್ತಿನಿ ಅಂತಾ ದರ್ಪ ತೋರಿಸಿದ್ದಾರೆ. ಶ್ರೀವತ್ಸಾ ಕೃಷ್ಣಾಗೆ ಕನ್ನಡ ಭಾಷೆ ಬಾರದ ಹಿನ್ನಲೆಯಲ್ಲಿ ಇಲಾಖಾ ಕಡತಗಳನ್ನು ಇಂಗ್ಲಿಷ್‍ನಲ್ಲೆ ಕೊಡುವಂತೆ ಕಿರಿಯ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.ಕಳೆದ ಮಾರ್ಚ್ 04 ರಂದು ಶ್ರೀವತ್ಸಾ ಕೃಷ್ಣಾ ಅಧಿಕಾರಿಗಳಿಗೆ ಈ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಶ್ರೀವತ್ಸಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್.ಜಿ ಸಿದ್ದರಾಮಯ್ಯ ನೋಟಿಸ್ ನೀಡಿದ್ದಾರೆ.                                  ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀವತ್ಸ ಕೃಷ್ಣಾ, ಕನ್ನಡ ಕಲಿಯದಿದ್ದಕ್ಕೆ ಈ ಹಿಂದೆ ಎರಡು ಬಾರಿ ಸಿಎಂ ಬೈದಿದ್ದರು.Sign in to your account
Username or Email Address


Password

 Remember Me


