ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ವಿಧಾನಸೌಧದಲ್ಲಿ 2017-18ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ 299 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ ಯೋಜನೆಗಳ ವಿವರ ಇಂತಿದೆ.– ಅಪರಾಧ ತಡೆಗಟ್ಟಲು ಮತ್ತು ತಂತ್ರಜ್ಞಾನ ಸಾಮರ್ಥ್ಯ ಕ್ಕೆ ಒತ್ತು ನೀಡಲು `ಸೈಬರ್ ಸಕ್ಯೂರಿಟಿ ಕೇಂದ್ರಗಳ ನಿರ್ಮಾಣ.
– ಕೇಂದ್ರ ಸರ್ಕಾರ ಕೌಶಲ್ಯ ಅಭಿವೃದ್ಧಿ ಯೋಜನಯಡಿ 1 ಲಕ್ಷ 10 ಸಾವಿರ ಜನರಿಗೆ ತರಬೇತಿ ನೀಡಲು `ಯುವಯುಗ’ ಕಾರ್ಯಕ್ರಮ ಅನುಷ್ಠಾನ.
– ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ 35.69 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಾರಾಲಯಗಳನ್ನು ಡಿಸೆಂಬರ್ 2017 ರೊಳಗೆ ಕಾರ್ಯಾರಂಭ.
– ಮಡಿಕೇರಿ ಹಾಗೂ ಗದಗ್‍ನಲ್ಲಿ ತಲಾ 5.75 ಕೋಟಿ ರೂ. ವೆಚ್ಚದಲ್ಲಿ 10 ಮೀ. ಗೋಳಾಕೃತಿಯ ತ್ರಿಡಿ ಕಿರು ತಾರಾಲಯ ಸ್ಥಾಪನೆ.
– ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೈಗಾರಿಕೋದ್ಯಮ ಸಹಯೋಗದೊಂದಿಗೆ ಚೈತನ್ಯ ಪೂರ್ಣ ತಂತ್ರಜ್ಞಾನ ಸ್ಥಾಪಿಸಲು ಉದ್ದೇಶ.
– ರಾಜ್ಯದ ಎಲ್ಲಾ ಗ್ರಾ.ಪಂಚಾಯ್ತಿಗಳಲ್ಲಿ ಉಚಿತ ವೈಫೈ ಸೌಲಭ್ಯ ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಕಿಯೋನೊಕ್ಸ್ ಸಹಭಾಗಿತ್ವದಲ್ಲಿ 2500 ಗ್ರಾ.ಪಂ ಗಳಲ್ಲಿ ಉಚಿತ ವೈಫೈ ಅನುಷ್ಠಾನ. ಇದಕ್ಕೆ 50 ಕೋಟಿ ರೂ. ವೆಚ್ಚ.
– 5 ಜಿಲ್ಲೆಗಳಿಗೆ ಒಂದರಂತೆ ಸಂಚಾರಿ ತಾರಾಲಯ ವಾಹನಗಳ ನಿಯೋಜನೆ.
– ಬೆಂಗಳೂರಿನ ಐಐಐಟಿ ಸಂಸ್ಥೆಯಲ್ಲಿ ಯಾಂತ್ರಿಕ ಬುದ್ಧಿಶಕ್ತಿ ಮತ್ತು ರೋಬೋಟಿಕ್ಸ್ ಕೇಂದ್ರ ಸ್ಥಾಪನೆ. ಇದಕ್ಕೆ 5 ಕೋಟಿ ರೂ. ವೆಚ್ಚ.Sign in to your account
Username or Email Address


Password

 Remember Me


