ಬೆಂಗಳೂರು: ರಾಜ್ಯ ಸರ್ಕಾರ ಬುಧವಾರದಂದು ಬಜೆಟ್‍ನಲ್ಲಿ ಪ್ರಕಟಿಸಿರುವ `ನಮ್ಮ ಕ್ಯಾಂಟೀನ್’ ಯೋಜನೆಗೆ ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ನಮ್ಮ ಕ್ಯಾಂಟೀನ್ ಅನುಷ್ಠಾನಕ್ಕೆ ಅಕ್ಷಯ ಪಾತ್ರೆ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಬೆಂಗಳೂರಿನ 198 ವಾರ್ಡ್‍ಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭವಾಗಲಿದ್ದು, ಅಕ್ಷಯ ಪಾತ್ರೆ ಫೌಂಡೇಷನ್ ಈ ಯೋಜನೆಯ ಹೊಣೆ ವಹಿಸಿಕೊಳ್ಳಲಿದೆ. ನಮ್ಮ ಕ್ಯಾಂಟೀನ್‍ಗಳಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಅಕ್ಷಯ ಪಾತ್ರೆ ಫೌಂಡೇಷನ್ ಇದಕ್ಕೆ 60 ರೂ. ನಿಗದಿ ಮಾಡಿದ್ದು, 35 ರೂಪಾಯಿಯನ್ನು ಸರ್ಕಾರ ನೀಡಲಿದೆ.ಆಹಾರ ಮತ್ತು ನಾಗರೀಕ ಪೂರೈಕೆ ಸರಬರಾಜು ಇಲಾಖೆಯಿಂದ ನಮ್ಮ ಕ್ಯಾಂಟೀನ್ ನಡೆಸಲು ಯೋಜನೆ ರೂಪಿಸಲಾಗಿದ್ದು, ಜಾಗ ನಿಯೋಜನೆಗೆ ಆಹಾರ ಇಲಾಖೆ ಬಿಬಿಎಂಪಿ ಸಹಾಯ ಪಡೆಯಲಿದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳೋ ದೃಷ್ಟಿಯಿಂದ ಆಲೋಚನೆ ಮಾಡಲಾಗಿದ್ದು, ಈಗಾಗ್ಲೇ ಆಹಾರ ಇಲಾಖೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದೆ. ಪ್ರತಿ ನಿತ್ಯ ಒಂದು ಲಕ್ಷ ಜನರಿಗೆ ಮೂರು ಹೊತ್ತಿನ ಆಹಾರ ಪೂರೈಕೆ ಮಾಡುವ ಆಶಯ ಹೊಂದಲಾಗಿದೆ.ಇನ್ನೆರಡು ತಿಂಗಳ ಒಳಗೆ ನಮ್ಮ ಕ್ಯಾಂಟಿನ್‍ನಲ್ಲಿ ಊಟದ ಭಾಗ್ಯ ಸಿಗಲಿದೆ. ನಮ್ಮ ಕ್ಯಾಂಟಿನ್ ಯೋಜನೆಗೆ 100 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ.Sign in to your account
Username or Email Address


Password

 Remember Me


