ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್, ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಉಚಿತ ಲ್ಯಾಪ್‍ಟಾಪ್ ನೀಡುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಬಜೆಟ್‍ನಲ್ಲಿ ಘೋಷಣೆಯಾದ ಅಂಶಗಳನ್ನು ನೀಡಲಾಗಿದೆ.ಉನ್ನತ ಶಿಕ್ಷಣ- 4401 ಕೋಟಿ ರೂ.
– ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ. 1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.– ಹೈದರಾಬಾದ್ ಕರ್ನಾಟಕ ಯೋಜನೆಯಡಿ ರಾಯಚೂರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ. ಯಾದಗಿರಿ, ರಾಯಚೂರಿನ ಎಲ್ಲ ಕಾಲೇಜುಗಳು ಹೊಸ ವಿವಿ ವ್ಯಾಪ್ತಿಗೆ.– 25 ಹೊಸ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆ – ತಲಾ 4 ಕೋಟಿ
– 23 ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಾಣ – ತಲಾ 2 ಕೋಟಿ
– ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿಗೆ 25 ಕೋಟಿ.
– ಧಾರವಾಡದ ಕರ್ನಾಟಕ ಕಾಲೇಜಿಗೆ 5 ಕೋಟಿ ಅನುದಾನ– ಹಂಪಿ ಕನ್ನಡ ವಿವಿ ಬೆಳ್ಳಿಹಬ್ಬದ ಅಂಗವಾಗಿ 25 ಕೋಟಿ
– ಕರ್ನಾಟಕ ವಿವಿ ಮಹಾಯೋಗಿ ವೇಮನ ಅಧ್ಯಯನ ಪೀಠಕ್ಕೆ 7 ಕೋಟಿ
– ಕರ್ನಾಟಕ ವಿವಿಯಲ್ಲಿ ಸಾಹು ಮಹಾರಾಜರ ಅಧ್ಯಯನ ಪೀಠ ಸ್ಥಾಪನೆ.
– ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ – 18,266 ಕೋಟಿ ರೂ.
– ಜುಲೈಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ವಿತರಣೆ
– ಬೇಸಿಗೆ, ರಜಾ ದಿನಗಳಿಗಾಗಿ ವಿಶ್ವಾಸ ಕಿರಣ ಯೋಜನೆ
– 1 ನೇ ತರಗತಿಯಿಂದ ಆಂಗ್ಲಭಾಷೆ ಪರಿಣಾಮಕಾರಿ ಯೋಜನೆ
– ಗ್ರಾಮಪಂಚಾಯ್ತಿ ಕೇಂದ್ರಗಳಲ್ಲಿ 12ನೇ ತರಗತಿವರೆಗೆ 176 ಸಂಯೋಜಿತ ಶಾಲೆಗಳು
– 1 ಸಾವಿರ ಪ್ರೌಢ ಶಾಲೆಗಳಿಗೆ ಮತ್ತು ಪಿಯು ಕಾಲೇಜುಗಳಲ್ಲಿ ಐಟಿ@ಸ್ಕೂಲ್
– ಶೂ ಮತ್ತು ಸಾಕ್ಸ್ ವಿತರಣೆ
– 8 ರಿಂದ 10ನೇ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ ಸಮವಸ್ತ್ರ ವಿತರಣೆ
– ಪ್ರಾಥಮಿಕೆ ಶಾಲೆಗಳಿಗೆ 10 ಸಾವಿರ, ಪ್ರೌಢಶಾಲೆಗಳಿಗೆ 1626, ಪಿಯುಗೆ 1191 ಉಪನ್ಯಾಸಕರನ್ನ ಎರಡು ಹಂತದಲ್ಲಿ ನೇಮಕ
– ಶಿಕ್ಷಣ ಕಿರಣ ಯೋಜನೆಯಡಿ ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಾತಿ. Sign in to your account
Username or Email Address


Password

 Remember Me


