ದಾವಣಗೆರೆ: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ ಮೂವರನ್ನು ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಮೂಲತಃ ಹಾಸನದ ಸುನೀಲ್ ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮೀಕಾಂತ್ ಬಂಧಿತರಾಗಿದ್ದಾರೆ. ಈ ಮೂವರು ನಗರದಲ್ಲಿ ಅಕ್ರಮವಾಗಿ ಹಣ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು. ಇದೇ ಮೂವರು ಎರಡು ದಿನಗಳ ಹಿಂದೆ ದಾವಣಗೆರೆಯ ಲಾಡ್ಜ್‍ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.ದಾವಣಗರೆರಯಿಂದ ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಚೆಕ್‍ಪೋಸ್ಟ್ ಬಳಿ ಪೊಲೀಸರು ವಾಹನ ಪರಿಶೀಲಿಸುವಾಗ ಹಳೇ ನೋಟು ಪತ್ತೆಯಾಗಿದೆ. ಬಂಧಿತರಿಂದ 500 ಮುಖಬೆಲೆಯ 50 ಸಾವಿರ ರೂಪಾಯಿ ಹಾಗೂ 1000 ಮುಖಬೆಲೆಯ 20.5 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. Sign in to your account
Username or Email Address


Password

 Remember Me


