ಮಂಗಳೂರು: ಮಾಜಿ ಸಚಿವ, ಶಾಸಕರೊಬ್ಬರ ಇನ್ನೋವಾ ಕಾರು ಹಾಗೂ ಓಮ್ನಿ ನಡುವೆ ಇಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೈಪಾಸ್ ಬಳಿಯ ಉರ್ಲಾಂಡಿ ಎಂಬಲ್ಲಿ ಅಫಘಾತ ಸಂಭವಿಸಿದೆ.ಅಪಘಾತದಿಂದ ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಸೇರಿದಂತೆ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮಾಜಿ ಸಚಿವರ ಕಾರು ಚಲಾಯಿಸುತ್ತಿದ್ದ ರವೀಂದ್ರಗೌಡ ಶಾಂತಿಗೋಡು (32) ಎಂಬವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಪರಿಣಾಮ ಮಾಜಿ ಸಚಿವರ ಕಾರು ನಜ್ಜುಗುಜ್ಜಾಗಿದೆ.ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


