ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜ್ಯದೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲೂ ಜೀವಜಲಕ್ಕಾಗಿ ಪರದಾಡುವ ಸ್ಥಿತಿ ಇದೆ. ಈ ಮಧ್ಯೆ ನಗರವನ್ನೇ ಬೆಚ್ಚು ಬಿಳಿಸೋ ಸುದಿಯೊಂದು ವರದಿಯಾಗಿದೆ. ನೀರಿನ ವಿಚಾರಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.ಹೌದು. ಟ್ಯಾಂಕರ್ ನೀರು ಪೋಲು ಮಾಡ್ತಿದ್ದ ಕೋಪಕ್ಕೆ ನಡೆದ ಜಗಳ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಸುಬ್ರಹ್ಮಣ್ಯಪುರದ ಮಂತ್ರಿ ಅಪಾರ್ಟ್‍ಮೆಂಟ್ ಬಳಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 27 ವರ್ಷದ ಬಿಸ್ವಜಿತ್ ದತ್ತಾ ಕೊಲೆಯಾದ ಯುವಕ.ಟ್ಯಾಂಕರ್ ನೀರು ಪೋಲು ಮಾಡ್ತಿದ್ದ ವಿಚಾರಕ್ಕೆ ಜಗಳ ನಡೆದಿದ್ದು, ಬಿಸ್ವಜಿತ್‍ನನ್ನು ಸೌದೆಯಲ್ಲಿ ಹೊಡೆದು ಹತ್ಯೆ ಮಾಡಲಾಗಿದೆ. ಇಲ್ಲಿನ ನಿರ್ಮಾಣ ಹಂತದ ಕಟ್ಟಡದ ಶೆಡ್‍ಗಳಲ್ಲಿ ಒರಿಯಾ ಹಾಗೂ ಪಶ್ಚಿಮ ಬಂಗಾಳ ಮೂಲದವರು ವಾಸ ಮಾಡುತ್ತಿದ್ದು, ಭಾನುವಾರದಂದು ಒರಿಯಾ ಮೂಲದವ್ರು ಹೋಳಿ ಆಚರಿಸಿ ಬಂದು ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಇದನ್ನ ಪಶ್ಚಿಮ ಬಂಗಾಳದ ಬಿಸ್ವಜಿತ್ ಪ್ರಶ್ನಿಸಿದಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಮಧ್ಯೆ ಬಿಸ್ವಜಿತ್ ಮೇಲೆ ಕಟ್ಟಿಗೆಗಳಿಂದ ಹಲ್ಲೆ ಮಾಡಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.ಕೊಲೆ ಸಂಬಂಧ 15 ಜನರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


