ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಇಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಮಹದೇಶ್ವರ ದರ್ಶನ ಪಡೆಯಲಿದ್ದಾರೆ.ಯಾವುದೇ ಮಹತ್ವದ ಹೊಸ ಕಾರ್ಯ ಆರಂಭಿಸುವ ಮೊದಲು ಮಲೆ ಮಹದೇಶ್ವರನ ದರ್ಶನವನ್ನು ಎಸ್‍ಎಂಕೆ ಪಡೆಯುತ್ತಾರೆ. ಹೀಗಾಗಿ ಇದೇ 15 ರಂದು ಬಿಜೆಪಿ ಸೇರ್ಪಡೆ ಆಗ್ತಿರುವ ಹಿನ್ನೆಲೆಯಲ್ಲಿ ಮನೆ ದೇವರ ದರ್ಶನ ಪಡೆಯಲು ತೆರಳಿದ್ದಾರೆ.ಮಂಗಳವಾರ ಸಂಜೆ ಎಸ್.ಎಂ ಕೃಷ್ಣ ದೆಹಲಿಗೆ ತೆರಳಲಿದ್ದು, ಬುಧವಾರದಂದು ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಪತ್ನಿ ಹಾಗೂ ಪುತ್ರಿಯರ ಹೆಚ್‍ಎಎಲ್ ಏರ್‍ಪೋರ್ಟ್ ಮೂಲಕ ಎಸ್‍ಎಂಕೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ದೇವರ ದರ್ಶನ ಪಡೆದು ಮಧ್ಯಾಹ್ನ ಹಿಂದಿರುಗಲಿದ್ದಾರೆ.Sign in to your account
Username or Email Address


Password

 Remember Me


