ಉಡುಪಿ: ಹಾಡಹಗಲೇ ಮೋರ್ ಸೂಪರ್ ಮಾರ್ಕೆಟ್ ದರೋಡೆಯಾಗಿದೆ. ಮಣಿಪಾಲದಲ್ಲಿರುವ ಮೋರ್ ಸೂಪರ್ ಮಾರ್ಕೆಟ್‍ಗೆ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ನುಗ್ಗಿ ಮೂರು ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.ಮಣಿಪಾಲದಲ್ಲಿರುವ ಸೂಪರ್ ಮಾರ್ಕೆಟ್‍ಗೆ ಮಂಕಿ ಕ್ಯಾಪ್ ಹಾಕಿಕೊಂಡು ನುಗ್ಗಿದ ಇಬ್ಬರು ಮ್ಯಾನೇಜರ್‍ಗೆ ಪಿಸ್ತೂಲ್ ತೋರಿಸಿದ್ದಾರೆ. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೋರ್ ಸಿಬ್ಬಂದಿಗೆ ತಲವಾರನ್ನು ಸಹ ಬೀಸಿದ್ದಾರೆ. ಪಿಸ್ತೂಲ್ ತಲೆಗಿಟ್ಟು ಕಾಸು ಕೇಳಿದ್ದಾರೆ. ಈ ಸಂದರ್ಭ ಮ್ಯಾನೇಜರ್ ಕಿವಿಗೆ ಗಾಯವಾಗಿದೆ. ಹೆದರಿದ ಮ್ಯಾನೇಜರ್ ಕ್ಯಾಬಿನ್‍ನಲ್ಲಿದ್ದ ಮೂರು ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳ ಕೈಗಿಟ್ಟಿದ್ದಾರೆ. ಕಾಸು ಕೈಗೆ ಸಿಗುತ್ತಿದ್ದಂತೆ ಇಬ್ಬರು ಮುಸುಕುಧಾರಿಗಳು ಪರಾರಿಯಾಗಿದ್ದಾರೆ. ಮೋರ್ ಸಿಬ್ಬಂದಿ ಕೂಡಲೇ ಮಣಿಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೋರ್ ಸಿಬ್ಬಂದಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಶ್ಚರ್ಯಕರ ವಿಷಯವೇನಂದ್ರೆ ಮೋರ್ ಸೂಪರ್ ಮಾರ್ಕೆಟಲ್ಲಿ ಯಾವುದೇ ಸಿಸಿಟಿವಿಯಿಲ್ಲ. ಮೋರ್ ನಿಯಮದ ಪ್ರಕಾರ ತಮ್ಮ ಸೂಪರ್ ಮಾರ್ಕೆಟ್‍ನಲ್ಲಿ ಸಿಸಿಟಿವಿ ಅಳವಡಿಸುವುದಿಲ್ಲ.ಮೋರ್ ಗ್ರಾಹಕರಿಗೆ ಸಿಸಿಟಿವಿ ಹಾಕಿದ್ರೆ ಅವಮಾನವಾಗುತ್ತದೆ. ಹೀಗಾಗಿ ಸಿಸಿಟಿವಿಯನ್ನು ಮಳಿಗೆಯ ಒಳಗೆ ಅಳವಡಿಸಿಲ್ಲ. ರಾಜ್ಯಾದ್ಯಂತ ಯಾವ ಮೋರ್ ಮಾರ್ಕೆಟಲ್ಲೂ ಸಿಸಿಟಿವಿ ಅಳವಡಿಸುವುದಿಲ್ಲ ಎಂದು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. Sign in to your account
Username or Email Address


Password

 Remember Me


