ಮಂಗಳೂರು: ಕಾಂಗ್ರೆಸ್‍ಗೆ ಪ್ರಿಯಾಂಕಾ ಗಾಂಧಿ ದೊಡ್ಡ ಆಸ್ತಿ. ಅವರನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳುತ್ತಾರೆ. ಆಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವುದಕ್ಕಿಂತ ಫುಲ್ ಟೈಮ್ ಇದ್ದು ಕೆಲಸ ಮಾಡಿದರೆ ಕಾಂಗ್ರೆಸಿಗೆ ಉತ್ತಮ ಅನ್ನೋದು ನನ್ನ ಭಾವನೆ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ ಹೇಳಿದರು.ಎಸ್‍ಎಂಕೆ ಬಗ್ಗೆ ವ್ಯಂಗ್ಯ: ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗಿರುವ ಎಸ್‍ಎಂ ಕೃಷ್ಣ ಅವರು ರಾಷ್ಟ್ರಪತಿಯಾಗಲು ಸೂಕ್ತ ವ್ಯಕ್ತಿ ಅಂತ ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಎಲ್ಲವನ್ನೂ ಅನುಭವಿಸಿದವರು ಎಸ್‍ಎಂ ಕೃಷ್ಣ. ಈಗ ಬಿಜೆಪಿಗೆ ಹೋಗಿ ರಾಷ್ಟ್ರಪತಿ ಸ್ಥಾನ ದೊರಕಬಹುದು. ಕಾಂಗ್ರೆಸಿನಲ್ಲಿದ್ದು ರಾಷ್ಟ್ರಪತಿ ಸ್ಥಾನ ಮಾತ್ರ ಅವರಿಗೆ ಸಿಕ್ಕಿರಲಿಲ್ಲ ಎಂತಾ ಕುಹಕವಾಡಿದ್ರು. ಕೃಷ್ಣ ಅವರ ಬಗ್ಗೆ ತುಂಬಾ ಗೌರವ ಇದೆ. ಆದರೆ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಬಗ್ಗೆ ಹೀಯಾಳಿಸಿ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ನನ್ನ ಸಹಮತ ಇಲ್ಲ ಎಂದು ಹೇಳಿದರು.ಬಿಜೆಪಿಗೂ ಸ್ಥಾನ ಸಿಗದ ರಾಜ್ಯಗಳಿವೆ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ದೊಡ್ಡ ವಿಚಾರವಲ್ಲ, ಕೆಲವೊಂದು ಸಲ ಈ ರೀತಿ ಆಗುತ್ತದೆ. ಬಿಜೆಪಿಗೂ ಒಂದೇ ಒಂದು ಸ್ಥಾನ ಸಿಗದ ರಾಜ್ಯಗಳೂ ಇದೆ ಅಂತಾ ಮಾರ್ಗರೆಟ್ ಆಳ್ವ ಹೇಳಿದ್ರು.Sign in to your account
Username or Email Address


Password

 Remember Me


