ಮೈಸೂರು: ನಾನು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದೇ ನನ್ನ ಆಸೆಯಾಗಿದೆ. ಹೀಗಾಗಿ ನನ್ನ ಈ ಬಯಕೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ರು.ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಪರಿಮಳಾ ನಾಗಪ್ಪ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿಗೆ ಸೇರಲಿ. ಅವರಂತವರು ಹಾಗು ನನ್ನಂತವರು ಪಕ್ಷಕ್ಕೆ ನೂರಾರು ಜನ ಬರ್ತಾರೆ ಹೋಗ್ತಾರೆ. ಆದರೆ ಅವರು ಟಿಕೆಟ್ ನೀಡಿದ್ರೆ ಮಾತ್ರ ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಸೋಮಣ್ಣ ಹೇಳಿದರು.ಪರಿಮಳಾ ನಾಗಪ್ಪ ಅವರು ಪಕ್ಷಕ್ಕೆ ಬರುವುದಕ್ಕೆ ಆಂತರಿಕ ವಿರೋಧ ಇಲ್ಲ. ಆದರೆ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿ ಪಕ್ಷಕ್ಕೆ ಬರಬೇಕು ಎಂದು ಸೋಮಣ್ಣ ಅವರು ಪರಿಮಳಾ ನಾಗಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. Sign in to your account
Username or Email Address


Password

 Remember Me


