ಕಲಬುರಗಿ: ಲಾಡ್ಜ್ ಒಂದರಲ್ಲಿ ಮಹಿಳೆಯೋರ್ವಳನ್ನು ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ.32 ವರ್ಷದ ಪದ್ಮಮ್ಮ ಕೊಲೆಯಾದ ಮಹಿಳೆ. ಪದ್ಮಮ್ಮ ನೆರೆಯ ತೆಲಂಗಾಣ ರಾಜ್ಯದ ತಾಂಡೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಪದ್ಮಮ್ಮಾ ಹಾಗು ನರಸಪ್ಪ ಎಂಬವರು ಸೇಡಂ ಪಟ್ಟಣಕ್ಕೆ ಬಂದು ಅಶೋಕ್ ಲಾಡ್ಜ್‍ನಲ್ಲಿ ತಂಗಿದ್ದರು.ಇಂದು ನಸುಕಿನ ಜಾವ ಪದ್ಮಮ್ಮರನ್ನು ಕೊಲೆ ಮಾಡಿ ನರಸಪ್ಪ ಪರಾರಿಯಾಗಿದ್ದಾನೆ. ನರಸಪ್ಪ ಕೂಡ ತಾಂಬುರ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಇನ್ನು ನರಸಪ್ಪ ಮತ್ತು ಪದ್ಮಮ್ಮ ಸತಿ-ಪತಿಗಳಾ ಎಂಬುವುದಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಸೇಡಂ ಪಟ್ಟಣ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ನರಸಪ್ಪನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. Sign in to your account
Username or Email Address


Password

 Remember Me


