ಕೊಪ್ಪಳ: ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಅದೇ ರೀತಿ ಹಣ ಡಬಲ್ ಮಾಡಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬರು ಹೆಣವಾದ ಘಟನೆ ಕೊಪ್ಪಳದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲೆಯ ಸಜ್ಜಿ ಹೊಲ ಪ್ರದೇಶದ ನಿವಾಸಿ ಕೆ.ಹುಸೇನ್ ಖಾನ್ ರಾತ್ರೋರಾತ್ರಿ ಶ್ರೀಮಂತರಾಗಲು ಹೋಗಿ ಪ್ರಾಣ ಬಿಟ್ಟಿದ್ದಾರೆ.ನಡೆದಿದ್ದೇನು: ಮೃತ ಹುಸೇನ್ ಅವರಿಗೆ ಸೈಯದ್ ಸಾಹೇಬ್ ಎಂಬಾತ ಒಂದಕ್ಕೆ ಹತ್ತುಪಟ್ಟು ಹಣ ಕೊಡಿಸುವುದಾಗಿ ನಂಬಿಸಿದ್ದ. ಹೀಗಾಗಿ ಹಣದ ಆಸೆಗೆ ಹುಸೇನ್ ಖಾನ್ ಐದಾರು ತಿಂಗಳ ಹಿಂದೆ ಸೈಯದ್ ಸಾಹೇಬ್ ಮೂಲಕ ಬಾಬಾ ಎಂಬಾತನಿಗೆ 2 ಲಕ್ಷ ರೂಪಾಯಿ ಕೊಟ್ಟಿದ್ರು. 20 ಲಕ್ಷದ ಆಸೆಗಾಗಿ ಬಾಬಾನ ಹಿಂದೆ ಕೆಲ ತಿಂಗಳು ಅಲೆದಾಡಿದ್ರು. ಆಗ ಬಾಬಾ 20 ಲಕ್ಷ ರೂಪಾಯಿ ಇವೆ ಎಂದು ಹೇಳಿ ಒಂದು ಬ್ಯಾಗ್ ಕೊಟ್ಟು ಮನೆಗೆ ಹೋಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ. ಅಂತೆಯೇ ಹುಸೇನ್ ಖಾನ್ ಕಳೆದ ಫೆಬ್ರವರಿ 20 ರಂದು ಮನೆಗೆ ಬಂದು ಬ್ಯಾಗ್ ತೆರೆದು ನೋಡಿದಾಗ ಬ್ಯಾಗ್ ತುಂಬಾ ಬರೀ ಕರಿ ಹಾಳೆಗಳು ಕಂಡಿವೆ. ಇದನ್ನು ನೋಡಿದ ಖಾನ್ ಗೆ ಹೃದಯಾಘಾತವಾಗಿದೆ. ಇದೀಗ ಪತ್ನಿ ಜಬೀನಾ ಗಂಡನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.ಕೆಲ ದಿನಗಳ ಹಿಂದೆ ತಂದೆಯ ಮೊಬೈಲ್ ನಲ್ಲಿನ ಕರೆಗಳ ವಾಯ್ಸ್ ರೆಕಾರ್ಡ್ ಪತ್ತೆಯಾಗಿದೆ ಅಂತಾ ಮೃತ ಹುಸೇನ್ ಖಾನ್ ಪುತ್ರ ಹೇಳಿದ್ದಾರೆ.Sign in to your account
Username or Email Address


Password

 Remember Me


