ಬೆಂಗಳೂರು: ವಿಚ್ಛೇದನ ಪ್ರಕರಣ ವಾಪಸ್ ಪಡೆಯುವಂತೆ ಗಂಡನ ಕಡೆಯವರು ಬೆದರಿಕೆ ಹಾಕಿದ್ದಾರೆಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಬೆಂಗಳೂರಿನ ನಿವಾಸಿ ಇಂದ್ರಜಿತ್ ನರ ದೌರ್ಬಲ್ಯವಿದ್ದರೂ ಮಧುರಾ ಎಂಬಾಕೆಯನ್ನು ಮದುವೆಯಾಗಿದ್ದ. ಮೊದಲ ರಾತ್ರಿಯಲ್ಲಿ ಇಂದ್ರಜಿತ್ ನಪುಂಸಕ ಎಂಬುದು ಮಧುರಾಗೆ ಗೊತ್ತಾಗಿತ್ತು. ಮದುವೆಯಾದ ಗಂಡ ನಪುಂಸಕ ಅಂತಾ ಗೊತ್ತಿದ್ದರು ಮಧುರಾ ಇಂದ್ರಜಿತ್‍ನೊಂದಿಗೆ ಸಂಸಾರ ಮಾಡಿದ್ದರು. ಗಂಡನ ದೌರ್ಬಲ್ಯ ಹೊರ ಜಗತ್ತಿಗೆ ಗೊತ್ತಾದರೆ ಮಾನ ಮರ್ಯಾದೆ ಹೊಗುತ್ತದೆ ಎಂದು ಮಧುರಾ ಭಯದಲ್ಲಿದ್ದರು. ಈ ನಡುವೆ ಇಂದ್ರಜಿತ್, ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಇಂದ್ರಜಿತ್ ಮತ್ತು ಕುಟುಂಬದವರು ಸೇರಿ ಮಧುರಾ ನಡತೆ ಸರಿ ಇಲ್ಲ ಅಂತಾ ಹಣೆಪಟ್ಟೆ ಕಟ್ಟಿದ್ದಾರೆ ಅಂತ ಆರೋಪಿಸಲಾಗಿದೆ.ಗಂಡ ಇಂದ್ರಜಿತ್ ಹಾಗೂ ಕುಟುಂಬದವರ ಕಾಟ ತಾಳಲಾರದೆ ಮಧುರಾ ವಿಚ್ಛೇದನದ ಮೊರೆ ಹೊಗಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಇಂದ್ರಜಿತ್‍ನಿಂದ ವಿಚ್ಛೇದನಕ್ಕಾಗಿ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ವಿಚ್ಛೇದನ ಪ್ರಕರಣ ವಾಪಸ್ ಪಡೆಯುವಂತೆ ಇಂದ್ರಜಿತ್ ಕಡೆಯವರಿಂದ ಬೆದರಿಕೆ ಬಂದಿದೆ ಎಂದು ಮಧುರಾ ಆರೋಪಿಸಿದ್ದಾರೆ. ರಾಜಕೀಯ ಬೆಂಬಲ ಹೊಂದಿರೋ ಇಂದ್ರಜಿತ್ ಅಪರಿಚಿತ ವ್ಯಕ್ತಿಗಳನ್ನು ಮನೆ ಬಳಿ ಕಳುಹಿಸಿ ಕೇಸ್ ವಾಪಸ್ ಪಡೆಯುವಂತೆ ಬೆದರಿಸಿದ್ದಾರೆ. ಕೇಸ್ ವಾಪಸ್ ಪಡೆಯದೆ ಹೋದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರೋ ಮಧುರಾ ಈ ಸಂಬಂಧ ಗಂಡ ಇಂದ್ರಜಿತ್, ವಿಶ್ವನಾಥ್, ಪರಶುರಾಮ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


