ರಾಯಚೂರು : ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕೆ ಆಗ್ರಹಿಸಿ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ವೈಟಿಪಿಎಸ್‍ನ ಒಂದನೇ ಘಟಕದ ವಾಣಿಜ್ಯಿಕ ಕಾರ್ಯಾರಂಭ ಹಿನ್ನೆಲೆ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯಕ್ ವಿದ್ಯುತ್ ಕೇಂದ್ರಕ್ಕೆ ಆಗಮಿಸಿದ್ದರು ಈ ವೇಳೆ ಭೂಸಂತ್ರಸ್ತರಾದ ರಾಘವೇಂದ್ರ, ತಿಮ್ಮಪ್ಪ, ರಾಘವೇಂದ್ರ ಸಾಗರ್ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದರು.ನಂತರ ಸೆಕ್ಯೂರಿಟಿ ಗಾರ್ಡ್‍ಗಳು ರೈತರನ್ನು ಮನವೊಲಿಸಿ ಕೆಳಗಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕುಮಾರ್ ನಾಯಕ್ ಈಗಾಗಗಲೇ 259 ಕುಟುಂಬಗಳಿಗೆ ಪರಿಹಾರ ನೀಡಿದ್ದೇವೆ. 78 ಜನರಿಗೆ ಉದ್ಯೋಗದ ತರಬೇತಿಯನ್ನೂ ಕೊಡುತ್ತಿದ್ದೇವೆ. ಉಳಿದ ರೈತರ ಮನವಿಯನ್ನ ಪರಿಗಣಿಸುತ್ತೇವೆ ಎಂದು ತಿಳಿಸಿದ್ದಾರೆ. Sign in to your account
Username or Email Address


Password

 Remember Me


