ಬೆಂಗಳೂರು: ಕಳೆದ ತಿಂಗಳಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ರೋಡಿಗಿಳಿದಿದ್ದಾರೆ. ಸಿನಿಮಾಗಳಲ್ಲಿ ಕೋಪಗೊಂಡ ಹೀರೋ ವಿಲನ್‍ಗಳ ಮೇಲೆ ಎಗರಿ ಬೀಳುವಂತೆ ಬೀದಿವ್ಯಾಪರಿ ಮೇಲೆ ಹರಿಹಾಯ್ದಿದ್ದಾರೆ. ಇದಕ್ಕೆಲ್ಲ ಕಾರಣ ಪೈರಸಿ ಸಿಡಿ.ಚಿತ್ರೋದ್ಯಮಕ್ಕೆ ಭಾರಿ ಹಾನಿವುಂಟು ಮಾಡುತ್ತಿರುವ ಪೈರಸಿ ಸಿಡಿ ಮಾರಾಟ ಜಾಲದ ವಿರುದ್ಧ ರಿಷಬ್ ಗುಡುಗಿದ್ದು, ತಾವೇ ರಿಯಲಿಟಿ ಚೆಕ್‍ಗೆ ಇಳಿದಿದ್ದಾರೆ. ರಾಜರಾಜೇಶ್ವರಿ ನಗರದ ರಸ್ತೆ ಬದಿಯಲ್ಲಿರುವ ಪೈರಸಿ ಸಿಡಿ ವ್ಯಾಪಾರಿ ಹತ್ತಿರ ತೆರೆಳಿ ಕಿರಿಕ್ ಪಾರ್ಟಿ ಸಿನಿಮಾ ಸಿಡಿ ಕೇಳಿದ್ದಾರೆ. ಆ ಬೀದಿ ವ್ಯಾಪಾರಿ ಕಿರಿಕ್ ಪಾರ್ಟಿದೂ ಇದೆ ರಾಮಾ ರಾಮಾ ರೇ ಚಿತ್ರದ ಸಿಡಿನು ಇದೆ ಬೇಕಾ ಸರ್ ಎಂದಿದ್ದಾನೆ. ಈ ಮಾತನ್ನ ಕೇಳಿದ ರಿಷಬ್ ಕೆಂಡಾಮಂಡಲರಾಗಿ ನಾವು ಕಷ್ಟಪಟ್ಟು ಸಿನಿಮಾ ಮಾಡೋದು, ನೀವುಗಳು ಇಲ್ಲಿ ಅರಾಮಾಗಿ ಪೈರಸಿ ಸಿಡಿ ಮಾರುತ್ತಿರಾ? ಎಂದು ಸಿಡಿಗಳ ರಾಶಿಯನ್ನ ರೋಡಿಗೆ ಬಿಸಾಡಿದ್ದಾರೆ.ನಂತರ ಸಿಡಿ ವ್ಯಾಪಾರಿಯನ್ನ ರಿಷಬ್ ಶೆಟ್ಟಿ ಪೂಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ. ಈ ಘಟನೆ ಸೋಮವಾರದಂದು ನಡೆದಿದ್ದು, ಮಂಗಳವಾರ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


