ಬೆಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸಂಗೀತ ಕೇಳದ ಹೃದಯವಿಲ್ಲ. ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಬೆರೆತುಕೊಂಡಿರುವ ಸಂಗೀತ ನಮ್ಮೊಳಗೆ ಜೀವಾಮೃತದಂತೆ ಕೆಲಸ ಮಾಡುತ್ತದೆ. ಪಕ್ಷಗಳ ಚಿಲಿಪಿಲಿ ಗಾನಕ್ಕೆ ಮರಗಿಡಗಳು ತಲೆದೂಗುವಂತೆ, ಪ್ರಕೃತಿಯ ರಾಗವನ್ನು ವನ್ಯ ಜೀವಿಗಳು ಆಲಿಸುತ್ತ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡುತ್ತವೆ. ನೆಮ್ಮದಿ ನೀಡುವ ಸಾಧನದಂತಿರುವ ಮ್ಯೂಸಿಕ್, ಕೇಳುಗರನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ ಅಂದರೆ ತಪ್ಪಾಗಲಾರದು. ಯಾವುದಕ್ಕೆ ಕಟ್ಟುಬೀಳದೇ ಸಂಗೀತವನ್ನು ಸತತ ಒಂಭತ್ತು ವರ್ಷಗಳಿಂದ ಪಬ್ಲಿಕ್ ಮ್ಯೂಸಿಕ್ ಕನ್ನಡಿಗರಿಗೆ ಉಣಬಡಿಸುತ್ತಿರೋದು ಹೆಮ್ಮೆಯ ಸಂಗತಿ.ಪಬ್ಲಿಕ್ ಮ್ಯೂಸಿಕ್‌ನ (Public Music) ನವ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಪಬ್ಲಿಕ್ ಟಿವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಮತ್ತತು ಲಹರಿ ವೇಲು, ಆನಂದ್ ಆಡಿಯೋಸ್ ಮುಖ್ಯಸ್ಥ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮುಖ್ಯಸ್ಥ ಅಶ್ವಿನಿ ರಾಮ್‌ಪ್ರಸಾದ್, ಝೇಂಕಾರ್ ಮ್ಯೂಸಿಕ್ ಮಾಲೀಕ ಭರತ್ ಜೈನ್ ಉಪಸ್ಥಿತರಿದ್ದರು. ಇದನ್ನೂ ಓದಿ: `ನವ ಸಂಭ್ರಮ’ಕ್ಕೆ ಹೊಸ ಸ್ಟಾರ್ಸ್ಸಿನಿಮಾ ತಾರೆಗಳಾದ ವಿಕ್ರಂ ರವಿಚಂದ್ರನ್, ಗಾನವಿ ಲಕ್ಷ್ಮಣ್, ಸಿದ್ದು ಮೂಲಿಮನಿ, ಅಮೃತ ಪ್ರೇಮ್, ಚೈತ್ರಾ ಜೆ. ಆಚಾರ್ ಹಾಗೂ ಬೃಂದಾ ಆಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಬ್ಲಿಕ್ ಮ್ಯೂಸಿಕ್‌ಗೆ ಶುಭಹಾರೈಸಿ, ಸಂಗೀತದೊಂದಿಗಿನ ತಮ್ಮ ನಂಟು ಹಾಗೂ ನೆನಪನ್ನು ಹಂಚಿಕೊಂಡರು.ಈ ಸಂದರ್ಭ ಮಾತನಾಡಿದ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (H.R.Ranganath), ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಜೀವನದಲ್ಲಿ ಸೋಲುಗಳು ಸಹಜ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದರ ವಿರುದ್ಧ ಹೋರಾಡಿ. ಸಮಸ್ಯೆಗಳನ್ನು ಎದುರಿಸದೇ ಇದ್ದರೇ ಗೆಲ್ಲಲು ನಾಳೆಗಳೇ ಇರುವುದಿಲ್ಲ ಎಂದರು.ನಮ್ಮ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇರುವುದು ಸಂಗೀತಕ್ಕೆ (Music) ಮಾತ್ರ. ಸಂಗೀತಕ್ಕೆ ಅನೇಕ ಶಕ್ತಿಯಿದೆ. ಇದು ನಮ್ಮ ನೆನಪನ್ನು ಮೆಲುಕು ಹಾಕುವಂತೆ ಮಾಡುತ್ತದೆ ಎಂದು ಈ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಕರ್ತರಾದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


