ಬೆಂಗಳೂರು: ಸಿಕ್ಸ್ ಪ್ಯಾಕ್ ಹುಚ್ಚಿಗೆ ಬಿದ್ದು ಸ್ಟಿರಾಯ್ಡ್ ತೆಗೆದುಕೊಂಡು ರಿಯಾಕ್ಷನ್ ಆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಯವಕರೊಬ್ಬರು ಮೃತಪಟ್ಟಿದ್ದಾರೆ.ಕಬ್ಬನ್ ಪೇಟೆ ನಿವಾಸಿ ಕಿರಣ್ ಮೃತಪಟ್ಟ ಯುವಕ. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಫಿಟ್ನೆಸ್ ಜಿಮ್ ಗೆ ಕಳೆದ ಮೂರು ತಿಂಗಳಿನಿಂದ ಹೋಗುತ್ತಿದ್ದ ಕಿರಣ್  ಟ್ರೈನರ್ ಸಲಹೆಯ ಮೇರೆಗೆ ಸ್ಟಿರಾಯ್ಡ್ ತೆಗೆದುಕೊಂಡಿದ್ದರು.ಸ್ಟಿರಾಯ್ಡ್ ತೆಗೆದುಕೊಂಡ ಪರಿಣಾಮ ಕಿರಣ್ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ದಿಢೀರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.Sign in to your account
Username or Email Address


Password

 Remember Me


