ಮೈಸೂರು: ನನ್ನ ಪತಿ ಗಂಡಸಲ್ಲ ಎಂದು ಹೆಂಡತಿ ಆರೋಪ ಮಾಡಿದಕ್ಕೆ ಮನನೊಂದ ಪತಿರಾಯ ಸಾಯಲು ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ನೀರಿನ ಟ್ಯಾಂಕರ್ ಹತ್ತಿದ್ದಾರೆ.ಅರುಣ್ ಕುಮಾರ್ ನೀರಿನ ಟ್ಯಾಂಕ್ ಏರಿದ ವ್ಯಕ್ತಿ. ಅರುಣ್ ಕುಮಾರ್ ನಗರದ ಗಾಯತ್ರಿಪುರಂ ನಿವಾಸಿ. ಪೇಂಟರ್ ಆಗಿ ಕೆಲಸ ಮಾಡಿಕೊಂಡಿರುವ ಅರುಣ್ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ನಂತರ ಮಕ್ಕಳಾಗದಕ್ಕೆ ಪತ್ನಿ ನೀನು ಗಂಡಸಲ್ಲ ಎಂದು ಹೇಳಿದ್ದಾರೆ.ಪತ್ನಿಯ ಮಾತುಗಳಿಂದ ಮನನೊಂದ ಅರುಣ್ ನೀರಿನ ಟ್ಯಾಂಕರ್ ಮೇಲಿಂದ ಕೆಳಗೆ ಬಿದ್ದು ಅಥವಾ ಕೈಯಲ್ಲಿರುವ ಪೆಟ್ರೋಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.ಸ್ಥಳಕ್ಕಾಗಮಿಸಿದ ಲಕ್ಷ್ಮೀಪುರಂ ಪೊಲೀಸರು ಅವರನ್ನು ರಕ್ಷಿಸಿ, ಅರುಣ್‍ರನ್ನು ವಶಕ್ಕೆ ಪಡೆದಿದ್ದಾರೆ. Sign in to your account
Username or Email Address


Password

 Remember Me


