ತುಮಕೂರು: ಸಿಡಿಲಿನಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಜಿಲ್ಲೆಯ ಗುಬ್ಬಿ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಆಲದ ಮರದ ಕೆಳಗೆ ನಿಂತಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ.40 ವರ್ಷದ ಮಂಜುಳಾ ಹಾಗೂ 13 ವರ್ಷದ ಭಾರತಿ ಸಾವನ್ನಪ್ಪಿರುವ ದುರ್ಧೈವಿಗಳು. ಮಂಜುಳಾ ಅವರ ಇನ್ನಿಬ್ಬರು ಮಕ್ಕಳಾದ ಶಿಲ್ಪಾ ಮತ್ತು ಸಂತೋಷ ಗಾಯಗೊಂಡಿದ್ದಾರೆ. ಗುಬ್ಬಿ ತಾಲೂಕಿನ ಅರಿಶಿಣಕುಂಟೆ ಗ್ರಾಮದಲ್ಲಿ ಗಿರಿಯಮ್ಮ ಎಂಬವರಿಗೆ ಸೇರಿದ 9 ಮೇಕೆಗಳು ಸಿಡಿಲಿಗೆ ಸಾವನ್ನಪ್ಪಿವೆ.ಸತತ ಎರಡು ತಿಂಗಳಿನಿಂದ ಬಿಸಿಲಿನಿಂದ ತತ್ತರಿಸಿದ ಜನತೆಗೆ ವರುಣನ ಸಿಂಚನ ಕೆಲವಡೆ ತಂಪು ತಂದಿದ್ದರೆ, ಇನ್ನು ಕೆಲವಡೆ ಸಿಡಿಲಿನ ಅವಘಡದಿಂದ ದುಃಖದ ಛಾಯೆ ಮೂಡಿಸಿದೆ. Sign in to your account
Username or Email Address


Password

 Remember Me


