ತುಮಕೂರು: ಇವರೆಂದರೆ ಸುದೀಪ್ ಗೆ ಬಹಳ ಪ್ರೀತಿ. ನಗರಕ್ಕೆ ಬಂದಾಗಲೆಲ್ಲ ಇವರನ್ನು ಮಾತನಾಡಿಸಿ ಹೋಗುತ್ತಿದ್ದರು. ನಿನ್ನೆ ಬೆಳಗ್ಗೆ ಇವರ ಪ್ರೀತಿಯ ಅಪ್ಪುಗೆಯನ್ನು ಸ್ವೀಕರಿಸಿದ್ದರು. ಆದರೆ ರಾತ್ರಿ ತನ್ನ ಪ್ರೀತಿಯ ಸ್ನೇಹಿತ, ಅಭಿಮಾನಿಯನ್ನು ಸುದೀಪ್ ಈಗ ಕಳೆದುಕೊಂಡಿದ್ದಾರೆ.ಸುದೀಪ್ ಅವರ ಆತ್ಮೀಯ ಗೆಳೆಯ ತುಮಕೂರಿನ ಕಪಾಲಿ ಹೋಟೆಲ್ ನ ಶಶಿ ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.ಹೆಬ್ಬುಲಿ ಚಿತ್ರದ ಪ್ರಚಾರಕ್ಕೆಂದು ನಟ ಸುದೀಪ್ ಅವರು ತುಮಕೂರಿಗೆ ಸೋಮವಾರ ಬಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಶಶಿ ಅಪ್ಪಿಕೊಂಡಿದ್ದರು.ಕಳೆದ 25 ವರ್ಷದ ಸ್ನೇಹಿತನಾಗಿದ್ದ ಶಶಿ ಅವರು, ಸುದೀಪ್ ಅವರ ಮೊದಲ ಚಿತ್ರ ಸ್ಪರ್ಶ ಮೂವಿಯ ಡಿಸ್ಟ್ರಿಬ್ಯೂಟರ್ ಆಗಿದ್ದರು. ತುಮಕೂರಿಗೆ ಬಂದಾಗಲೆಲ್ಲಾ ಭೇಟಿಯಾಗುತ್ತಿದ್ದರು. ಅದರಂತೆ ನಿನ್ನೆ ಕೂಡಾ, ಹೆಬ್ಬುಲಿ ಚಿತ್ರದ ಪ್ರಚಾರಕ್ಕೆ ಸುದೀಪ್ ಆಗಮಿಸಿದಾಗ, ಶಶಿ ಅವರು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದರು.ಆದರೆ ಆ ಗೆಳೆತನ ನಿನ್ನೆಗೆ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೊ? ಆದರೂ ಶಶಿ ಕೊನೆಯ ಅಪ್ಪುಗೆಯ ನಂತರ ರಾತ್ರಿ ಸಾವನ್ನಪ್ಪಿದ್ದು ಸುದೀಪ್ ಅಭಿಮಾನಿಗಳಿಗೆ ಬೇಸರ ತಂದಿದೆ. ದು:ಖ ತಂದಿದೆ: ತುಮಕೂರಿನ ಅಭಿಮಾನಿ ಶಿವು ಮೃತಪಟ್ಟಿರುವುದು ನನಗೆ ದುಃಖ ತಂದಿದೆ. ಎಲ್ಲರಂತೆ ನನಗೂ ಅಭಿಮಾನಿಗಳು ಅಂದ್ರೆ ಬಹಳ ಇಷ್ಟ. ಆದರೆ ಆತನ ಸಾವು ನನಗೆ ನೋವು ತಂದಿದೆ. ನನ್ನ ಜೊತೆ ಹಲವು ದಿನಗಳಿಂದಲೂ ಒಟನಾಟ ಇಟ್ಟುಕೊಂಡಿದ್ದ. ನಾನು ಅಲ್ಲೆ ಇದ್ದರೆ ಅವನನ್ನು ಖಂಡಿತಾ ನೋಡಲು ಹೋಗುತ್ತಿದ್ದೆ ಎಂದು ಹುಬ್ಬಳ್ಳಿಯಲ್ಲಿ ಸುದೀಪ್ ಪ್ರತಿಕ್ರಿಯಿಸಿದ್ದಾರೆ.ಇದನ್ನೂ ಓದಿ: ಸ್ಯಾಂಡಲ್‍ವುಡ್‍ನ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿದ ಹೆಬ್ಬುಲಿSign in to your account
Username or Email Address


Password

 Remember Me


