ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿ ಆಂಧ್ರದಲ್ಲಿ ಸೆರೆಸಿಕ್ಕಿದ್ದ ಮಧುಕರ್ ರೆಡ್ಡಿಯನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.ಕರ್ನಾಟಕದಲ್ಲಿ ಬರೀ ಹಲ್ಲೆ ಮಾಡದೆ ಆಂಧ್ರದಲ್ಲಿಯೂ ಮಹಿಳೆಯರ ರುಂಡ ಚೆಂಡಾಡಿದ್ದ ಕ್ರೂರಿ ಮಧುಕರ್ ರೆಡ್ಡಿಯನ್ನು ಸದ್ಯ ಪೊಲೀಸರು ಬಾಡಿ ವಾರೆಂಟ್ ಮೇಲೆ ನಗರಕ್ಕೆ ಕರೆತಂದಿದ್ದಾರೆ.ಆಂಧ್ರದಲ್ಲೂ ಈತ ಮಹಿಳೆಯರನ್ನು ಕೊಲೆ ಮಾಡಿದ್ದರ ಹಿನ್ನೆಲೆಯಲ್ಲಿ ಆಂಧ್ರ ಪೊಲೀಸ್ರು ನಮ್ ಕೇಸ್ ಮುಗಿಸ್ತಿವಿ ಅಂತ ಪೈಪೋಟಿಗೆ ಬಿದ್ದಿದ್ದರು. ಇದೀಗ ಅಲ್ಲಿ ತನಿಖೆ ಪೂರ್ಣಗೊಂಡಿದ್ದು, ಬಳಿಕ ಪೊಲೀಸ್ರು ಬೆಂಗಳೂರಿಗೆ ಕರೆತಂದ್ರು.ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ಸೋಮವಾರ ಇಡೀ ರಾತ್ರಿ ಆರೋಪಿಯನ್ನು ವಿಚಾರಣೆ ಮಾಡಿದ್ರು. ಬೆಂಗಳೂರಿನ ಎಸ್.ಜೆ ಪಾರ್ಕ್ ಪೊಲೀಸರೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ವಿಚಾರಣೆ ವೇಳೆ ಆ ಕ್ಷಣಕ್ಕೆ ಏನೋ ಆಗೋಯ್ತು. ಅದ್ರ ಬಗ್ಗೆ ನನಗೆ ಯಾವುದೇ ಬೇಜಾರ್ ಆಗ್ಲಿ. ಪಶ್ಚಾತ್ತಾಪವಾಗ್ಲಿ ಇಲ್ಲ ಅಂತ ಪೊಲೀಸರ ಮುಂದೆ ನಗುನಗುತ್ತಲೇ ಆರೋಪಿ ಹೇಳಿಕೆ ನೀಡಿದ್ದಾನೆ.Sign in to your account
Username or Email Address


Password

 Remember Me


