ಕಲಬುರಗಿ: ಹಾಲಿ ಶಾಸಕರ ಮಾಜಿ ಆಪ್ತ ಸಹಾಯಕ ಶಾಲಾ ಕಟ್ಟಡದಲ್ಲಿಯೇ ಶಿಕ್ಷಕಿಯ ಜೊತೆ ಕಾಮದಾಟ ನಡೆಸಿದ್ದಾರೆ. ಕಲಬುರಗಿ ನಗರದ ಪ್ರ್ಯಾಕ್ಟಿಸಿಂಗ್ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿಯೇ ತನ್ನ ಪ್ರಿಯಕರನನ್ನು ಶಾಲೆಯ ಕೋಣೆಗೆ ಕರೆಸಿ ಸರಸ-ಸಲ್ಲಾಪವಾಡಿದ್ದಾರೆ.ಸುನಿತಾ ಮಡ್ಡೆ ಎಂಬ ಶಿಕ್ಷಕಿ ಗಂಡನನ್ನು ಬಿಟ್ಟು ಆಳಂದ್ ಶಾಸಕರಾದ ಬಿ.ಆರ್.ಪಾಟೀಲ್‍ರ ಮಾಜಿ ಪಿಎ ದೇವೆಂದ್ರ ಬಿರಾದಾರ ಎಂಬವರ ಜೊತೆ ಅನೈತಿಕ ಸಂಬಂಧ ಬೆಳೆಸಿ ಈಗ ಸುದ್ದಿಯಾಗಿದ್ದಾರೆ. ದೇವೆಂದ್ರ ಬಿರಾದಾರ ಅವರಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ಕೈ ಕೊಟ್ಟು ಈಗ ಶಿಕ್ಷಕಿಯ ಹಿಂದೆ ಬಿದ್ದಿದ್ದಾರೆ.ಸುನಿತಾ ಮತ್ತು ದೇವೆಂದ್ರ ಇಬ್ಬರ ಅನೈತಿಕ ಸಂಬಂಧ ಇಲಾಖೆಗೂ ತಿಳಿದಿತ್ತು. ಹಿಂದಿನ ಜಿಲ್ಲಾ ಪಂಚಾಯತ್ ಸಿಇಒ ಅನಿರುದ್ಧ್ ಬೇರೆ ಕಡೆಗೆ ವರ್ಗಾವಣೆ ಮಾಡಿ ಅಂತ ಡಿಡಿಪಿಐ(ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ) ರಿಗೆ ಆದೇಶಿಸಿದ್ರು. ಆದ್ರೆ ದೇವೆಂದ್ರ ಬಿರಾದಾರ್ ಅವರು ಶಾಸಕ ಬಿ.ಆರ್.ಪಾಟೀಲ್‍ರಿಂದ ಪತ್ರ ತಂದು ಸುನಿತಾಳನ್ನು ವರ್ಗಾವಣೆ ಮಾಡದಂತೆ ಒತ್ತಡ ಹಾಕಿಸಿದ್ದಾರೆ.ಆದರೆ ದೇವೆಂದ್ರ ಮಾತ್ರ ಅಂಥದ್ದೇನು ಕಥೆ ಇಲ್ಲಾ ಎಂದು ಹೇಳುತ್ತಿದ್ದಾರೆ. ದೇವೇಂದ್ರರ ಕೃಷ್ಣಲೀಲೆ ತಿಳಿದ ಶಾಸಕ ಬಿ.ಆರ್.ಪಾಟೀಲ್ ಅವರು ಕಿಕ್ ಔಟ್ ನೀಡಿದ್ದಾರೆ. Sign in to your account
Username or Email Address


Password

 Remember Me


