ಮೈಸೂರು: ರೌಡಿ ಶೀಟರ್ ಮೇಲೆಯೇ ಟೆಕ್ಕಿಗಳು ಹಲ್ಲೆ ಮಾಡಿರೋ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆ ಬಳಿ ನಡೆದಿದೆ.ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಭಿ ಎಂಬ ರೌಡಿ ಶೀಟರ್ ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ರೌಡಿ ಶೀಟರ್‍ಗೆ ಇಬ್ಬರು ಟೆಕ್ಕಿಗಳು ಸಿಕ್ಕಿದ್ರು. ಟೆಕ್ಕಿಗಳಿಗೆ ಬೈಕ್ ತಳ್ಳುವಂತೆ ಅಭಿ ಅವಾಜ್ ಹಾಕಿದ್ದ. ರೌಡಿಶೀಟರ್ ಅವಾಜ್‍ಗೆ ಬೆದರಿ ಮೊದಲು ಓಡಿದ ಟೆಕ್ಕಿಗಳು ಸ್ವಲ್ಪ ದೂರ ಓಡಿದ ಬಳಿ ಹಿಂತಿರುಗಿ ಬಂದು ಚಾಕುವಿನಿಂದ ರೌಡಿಶೀಟರ್‍ಗೆ ಇರಿದಿದ್ದಾರೆ.ಹಲ್ಲೆಗೊಳಗಾದ ಅಭಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೈದ ಇಬ್ಬರು ಟೆಕ್ಕಿಗಳಾದ ಮೋಹಿತ್ ಹಾಗೂ ತಮಿಳರಸನ್‍ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಸದ್ಯ ಅಭಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.Sign in to your account
Username or Email Address


Password

 Remember Me


