ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿಬಂದಿದೆ. ಉದ್ಯಮಿ ಕಾರ್ತಿಕ್ ರೆಡ್ಡಿ ಎಂಬವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಾ. 4 ರಂದು ನಗರದ ಹೆಚ್‍ಎಎಲ್ ಬಳಿಯ ಇಸ್ರೋ ಹಿಂದಿನ ಗೇಟ್ ಬಳಿ ಅಮೃತ್ ರೆಡ್ಡಿ, ನಿಶ್ವಂತ್ ರೆಡ್ಡಿ ಸೇರಿ ಮೂವರು ದುಷ್ಕರ್ಮಿಗಳು ಕಾರ್ತಿಕ್ ರೆಡ್ಡಿ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ್ದರು. ತಲೆಗೆ ಗನ್ ಪಾಯಿಂಟ್ ಇಟ್ಟು ಫೈರ್ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗನ್ ಇಟ್ಟ ವ್ಯಕ್ತಿಯನ್ನು ತಳ್ಳಿ ಕಾರ್ತಿಕ್ ಪಾರಾಗಿದ್ದರು.ಬಳಿಕ ಮೂವರು ದುಷ್ಕರ್ಮಿಗಳು ಕಾರ್ತಿಕ್ ರೆಡ್ಡಿಗೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಾರ್ತಿಕ್ ಹೆಚ್‍ಎಎಲ್ ಠಾಣೆಗೆ ದೂರು ನೀಡಿದ್ದು, ಸದ್ಯ ಮೂವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.  Sign in to your account
Username or Email Address


Password

 Remember Me


