ಬೆಂಗಳೂರು: ಹೊಟೇಲ್‍ಗಳಲ್ಲಿ ಪಾರ್ಸೆಲ್ ತಗೊಳ್ಳೋ ಮುನ್ನ ಸ್ವಲ್ಪ ಎಚ್ಚರವಾಗಿರಿ. ಯಾಕಂದ್ರೆ ಹಲ್ಲಿ, ಜಿರಲೆ ಬರೋದನ್ನು ಇಲ್ಲಿವರೆಗೂ ನೋಡಿದ್ವಿ. ಆದ್ರೆ, ಈಗ ಫ್ರೈಡ್ ರೈಸ್ ಪಾರ್ಸೆಲ್ ತಗೆದುಕೊಂಡರೆ ಅದರ ಜೊತೆ ಬ್ಯಾಂಡೇಜ್ ಪಾರ್ಸೆಲ್ ಬಂದಿದೆ.ಕೆಲ ವಿದ್ಯಾರ್ಥಿನಿಯರು ರಾಮಯ್ಯ ಕಾಲೇಜ್ ಬಸ್‍ಸ್ಟಾಪ್ ಬಳಿ ಇರುವ ಉಡುಪಿ ಗಾರ್ಡನ್ ಹೊಟೇಲ್‍ನಲ್ಲಿ ಫ್ರೈಡ್ ರೈಸ್ ಪಾರ್ಸೆಲ್ ತಗೊಂಡಿದ್ದಾರೆ. ಮನೆಗೆ ಹೋಗಿ ಪಾರ್ಸೆಲ್ ಓಪನ್ ಮಾಡಿ ತಿನ್ನಲು ಮುಂದಾಗಿದ್ದಾರೆ.ಎರಡ್ಮೂರು ತುತ್ತು ತಿಂದ ಮೇಲೆ ರೈಸ್ ಜೊತೆಗೆ ಬಳಕೆಯಾಗಿರುವ ಬ್ಯಾಂಡೇಜ್ ಕೂಡ ಸಿಕ್ಕಿದೆ. ಬ್ಯಾಂಡೇಜ್ ನೋಡಿದ ಕೂಡಲೇ ವಿದ್ಯಾರ್ಥಿನಿ ವಾಂತಿ ಮಾಡಿಕೊಂಡಿದ್ದಾಳೆ.ಬ್ಯಾಂಡೇಜ್ ಪಾರ್ಸೆಲ್ ಅನ್ನು ಹೊಟೇಲ್‍ನವರಿಗೆ ತೋರಿಸಿದರೆ ಬೈ ಮಿಸ್ಟೇಕ್ ಆಗಿದೆ. ಆಡುಗೆ ಮಾಡುವ ವ್ಯಕ್ತಿ ಹೊಸಬ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. Sign in to your account
Username or Email Address


Password

 Remember Me


