ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್‍ನಿಂದ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.ನಗರದ ವಲ್ಲಭಾಯಿ ವೃತ್ತದ ಮೆಹಬೂಬ ನಾಲಬಂದ್ ಮತ್ತು ಜಬ್ಬರ್ ರಕ್ಕಸಗಿ ಎಂಬವರಿಗೆ ಸೇರಿದ ಎಲೆಕ್ಟ್ರಿಕ್ ಹಾಗೂ ಬಾಂಡೆ ಸಾಮಗ್ರಿಗಳ ಅಂಗಡಿ ಹಾಗೂ ಹಿಂಬದಿಯ ಗೋದಾಮಿಗೆ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಈ ಅಂಗಡಿ ಹಾಗೂ ಗೋದಾಮು ಇಕ್ಕಟ್ಟಾದ ಪ್ರದೇಶದಲ್ಲಿದ್ದು ಅಂಗಡಿಗಳ ಮೇಲೆಯೇ ಎಲೆಕ್ಟ್ರಿಕ್ ವೈರ್ ಹಾದು ಹೋಗಿದೆ. ಹೀಗಾಗಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸ್ತಿದ್ದಾರೆ.ಘಟನೆ ಬಗ್ಗೆ ವಿಷಯ ತಿಳಿದ ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಿದ್ದಾರೆ. ಸ್ಥಳದಲ್ಲಿ ಕೆಲ ಹೊತ್ತು ದಟ್ಟ ಹೊಗೆ ಕಾಣಿಸಿಕೊಂಡು ಜನರನ್ನ ಗಾಬರಿಗೊಳಿಸಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಬಾಗಲಕೋಟೆ ಎಸ್‍ಪಿ ಸಿಬಿ ರಿಷ್ಯಂತ್ ಅಂಗಡಿಗಳ ಸುತ್ತ ಮುತ್ತ ಪರಿಶೀಲನೆ ನಡೆಸಿದ್ರು.Sign in to your account
Username or Email Address


Password

 Remember Me


