ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಕುಡಿತದ ಚಟದಿಂದ ಅತ್ತೆ ಮಾವಂದಿರನ್ನು ಕೊಂದು, ತನ್ನ ಪತ್ನಿ ಮತ್ತು ಪಕ್ಕದ ಮನೆಯವನನ್ನು ಕೋಮಾ ಸ್ಥಿತಿಗೆ ತಂದಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ.ಮೂಲತಃ ತಮಿಳುನಾಡಿನ ಕೃಷ್ಣಗಿರಿಯವನಾದ ಸೆಂಥಿಲ್ ಕುಮಾರ್ ಬೆಂಗಳೂರಿನ ಕೋಣನಕುಂಟೆಯ ಅನ್ನಪೂರ್ಣೆಶ್ವರಿ ಲೇಔಟ್‍ನಲ್ಲಿ ತನ್ನ ಅತ್ತೆ ಮುರುಗಮ್ಮ ಮತ್ತು ಮಾವ ಕುಮಾರ್, ಹೆಂಡತಿ ಸತ್ಯವತಿ ಜೊತೆ ವಾಸವಿದ್ದ. ಏನೂ ಕೆಲಸ ಮಾಡದೇ ಕುಡಿತವನ್ನೇ ಚಟ ಮಾಡಿಕೊಂಡಿದ್ದ ಈತ ದಿನನಿತ್ಯ ತನ್ನ ಮಾವ, ಅತ್ತೆ, ಹೆಂಡತಿಯ ಜೊತೆ ಜಗಳ ಮಾಡ್ತಿದ್ದ. ಶುಕ್ರವಾರ ಸಂಜೆ 7.30ರ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಇದ್ದ ಈತ ತನ್ನ ಮಾವ, ಅತ್ತೆ ಮೇಲೆ ಜಗಳಕ್ಕಿಳಿದಿದ್ದು, ಮಾತಿಗೆ ಮಾತು ಬೆಳೆದು ಅವರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.ಸತ್ಯವತಿ ಮತ್ತು ಸೆಂಥಿಲ್ ಕುಮಾರ್ ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ರು. ಆದ್ರೆ ಸೆಂಥಿಲ್ ಕಾಲ ಕಳೆದಂತೆ ಹೆಂಡತಿಗೆ ಕಿರುಕುಳ ನೀಡ್ತಾ ಇದ್ದ. ಇದರಿಂದ ಬೇಸತ್ತು ಸತ್ಯವತಿ ಬೆಂಗಳೂರಿನಲ್ಲಿ ತನ್ನ ತಂದೆಯ ಮನೆಯಲ್ಲಿದ್ದಳು. ಹೆಂಡತಿಯನ್ನು ಕಳುಹಿಸಿಕೊಡುವಂತೆ ಅತ್ತೆ – ಮಾವನನ್ನು ಸೆಂಥಿಲ್ ಪೀಡಿಸುತ್ತಿದ್ದ. ಈ ವೇಳೆ ಕುಡಿದು ಬಂದು ಈ ಕೃತ್ಯವೆಸಗಿದ್ದಾನೆ. ತನ್ನ ತಂದೆ- ತಾಯಿ ಮೇಲೆ ಹಲ್ಲೆ ಮಾಡೋದನ್ನು ತಡೆಯಲು ಹೋದ ಹೆಂಡತಿ ಸತ್ಯವತಿಗೂ ಚಾಕುವಿನಿಂದ ಚುಚ್ಚಿದ್ದಾನೆ. ಗಲಾಟೆಯನ್ನು ತಡೆಯಲು ಬಂದ ಪಕ್ಕದ ಮನೆಯ ಮಂಜುನಾಥ್ ಎಂಬ ಯುವಕನಿಗೆ ಚಾಕುವಿನಿಂದ ತಿವಿದಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಗೆ ಸತ್ಯವತಿ ಮತ್ತು ಮಂಜುನಾಥ್‍ನನ್ನು ದಾಖಲು ಮಾಡಲಾಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ.ಘಟನೆಗೆ ಸಂಬಂಧಿಸಿಂತೆ ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸರು ಕಾಯ9ಚರಣೆ ನಡೆಸಿ ಆರೋಪಿ ಅಳಿಯ ಸೆಂಥಿಲ್ ಕುಮಾರ್ ನನ್ನು ಮಾದವಾರ ಬಳಿ ಬಂಧಿಸಿದ್ದಾರೆ.Sign in to your account
Username or Email Address


Password

 Remember Me


