ವಿಜಯಪುರ: ಬಾವಿಗೆ ಈಜಲು ಹೋಗಿದ್ದ ಬಾಲಕನೊಬ್ಬ ಮನೆಗೆ ಶವವಾಗಿ ಮನೆಗೆ ಹಿಂದಿರುಗಿದ ಘಟನೆ ವಿಜಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕದರಗುಂಡ ಗ್ರಾಮದಲ್ಲಿ ನಡೆದಿದೆ.ಫೈಜಲ್ (14) ಮೃತಪಟ್ಟ ಬಾಲಕ. ಫೈಜಲ್ ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ಬಾವಿಯಲ್ಲಿ ತನ್ನ ಗೆಳಯರೊಂದಿಗೆ ಈಜಲು ಹೋಗಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಎಲ್ಲರೂ ಬಾವಿಯಲ್ಲಿ ಈಜಲು ಹೋಗಿದ್ದಾರೆ. ಕೊನೆಗೆ ಫೈಜಲ್ ಹೊರಗೆ ಬರಲಾರದೇ ಸಾವನ್ನಪ್ಪಿದ್ದಾನೆ. ಬಾವಿಯಲ್ಲಿನ ಕೆಸರಿನಲ್ಲಿ ಸಿಕ್ಕಿದ್ದರಿಂದ ಮೇಲೆ ಬರಲಾರದೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.ಈಜಲು ಹೋದ ಮಗ ಶವವಾಗಿ ಬಂದಿದ್ದರಿಂದ ಫೈಜಲ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ಅಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. Sign in to your account
Username or Email Address


Password

 Remember Me


