ಬೆಂಗಳೂರು: ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದ್ರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ವರ ಕಾರ್ತಿಕ್ ಹಾಗೂ ಆತನ ತಾಯಿಯನ್ನು ಬಂಧಿಸಲಾಗಿದೆ.ಬೆಂಗಳೂರಿನ 32 ವರ್ಷದ ನಾಗಲಕ್ಷ್ಮಿ ಮತ್ತು ಕಾರ್ತಿಕ್‍ಗೆ ಕಳೆದ ವರ್ಷವೇ ನಿಶ್ಚಿತಾರ್ಥವಾಗಿತ್ತು. ಇದೇ ಮೇ 22ರಂದು ಇಬ್ಬರೂ ಸತಿ-ಪತಿಗಳಾಗಬೇಕಿತ್ತು. ಆದ್ರೆ ಮದುವೆ ನಿಶ್ಚಿತಾರ್ಥ ಬಳಿಕ ಕಾರ್ತಿಕ್ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದಕ್ಕೆ ಭಾವಿ ಪತ್ನಿ ಕಾಲ್ಗುಣವೇ ಕಾರಣ ಎಂದು ಭಾವಿಸಿದ ವರ ಕಾರ್ತಿಕ್ ಮದುವೆ ಆಗಲ್ಲ ಎಂದು ಹೇಳಿದ್ದ. ಇದರಿಂದ ಮನನೊಂದ ವಧು ನಾಗಲಕ್ಷ್ಮೀ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ರು.ಸಾಯುವ ಮುನ್ನ ನಾಗಲಕ್ಷ್ಮೀ ಐದು ಪುಟಗಳ ಡೆತ್‍ನೋಟ್ ಬರೆದಿಟ್ಟಿದ್ರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ರಾಜರಾಜೇಶ್ವರಿ ನಗರ ಪೊಲೀಸರು ಹೈದ್ರಾಬಾದ್‍ನಲ್ಲಿದ್ದ ಕಾರ್ತಿಕ್ ಮತ್ತು ಅವನ ತಾಯಿಯನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.Sign in to your account
Username or Email Address


Password

 Remember Me


