ಮಂಡ್ಯ: ಪತಿಯ ಸ್ನೇಹಿತನೊಬ್ಬ ತನ್ನ ಅಶ್ಲೀಲ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ ಮನನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಲ್ಲೆಯ ಮದ್ದೂರು ತಾಲೂಕಿನ ಸೋಮಮಹಳ್ಳಿ ಗ್ರಾಮದಲ್ಲಿ ನಡೆದಿದೆ.ಸಂಗೀತಾ (25) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಸಂಗೀತಾ ಅವರು ನವೀನ್ ಎಂಬವರ ಜೊತೆ ಪ್ರೇಮ ವಿವಾಹವಾಗಿದ್ದಳು. ಸಂಗೀತಾ ತನ್ನ ಪತಿಯ ಗೆಳೆಯ ಹೊಸಬೂದನೂರು ಗ್ರಾಮದ ನಿವಾಸಿ ಅನಿಲ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಅನಿಲ್ ಅಶ್ಲೀಲ ದೃಶ್ಯಗಳನ್ನು ತನ್ನ ಮೊಬೈಲನಲ್ಲಿ ಸೆರೆಹಿಡಿದು ಬ್ಲಾಕ್‍ಮೇಲ್ ಮಾಡುತ್ತಿದ್ದನು.ಕೊನೆಗೆ ಅನಿಲ್ ಸಂಗೀತಾ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದನು. ವಿಡಿಯೋ ವೈರಲ್ ಆಗುತ್ತಿದ್ದಂತೆ ಮನನೊಂದು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸಂಗೀತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ ನೋಟ್‍ನಲ್ಲಿ ನನ್ನ ಸಾವಿಗೆ ಪತಿ ಗೆಳೆಯ ಅನಿಲ್ ಎಂದು ಬರೆಯಲಾಗಿದೆ.ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅನಿಲ್ ಬಂಧನಕ್ಕಾಗಿ ಜಾಲ ಬೀಸಿದ್ದಾರೆ. Sign in to your account
Username or Email Address


Password

 Remember Me


