ಮಂಡ್ಯ: ಪೋಷಕರು ಮಾಡಿದ ಒಂದು ಚಿಕ್ಕ ತಪ್ಪಿನಿಂದ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.ಕೆಆರ್ ಪೇಟೆ ಪಟ್ಟಣದ ಸುಭಾಷ್ ನಗರ ನಿವಾಸಿ ಲೋಕೇಶ್ ಎಂಬವರ ಎರಡು ವರ್ಷದ ಮಗು ದೀಕ್ಷಿತ್ ಸಾವನ್ನಪ್ಪಿದ ಮಗು. ಮಗುವಿಗೆ ಕೆಮ್ಮು ಇದ್ದಿದ್ದರಿಂದ ಕೆಮ್ಮಿನ ಔಷಧಿಯನ್ನ ಪೋಷಕರು ಕುಡಿಸಿದ್ದಾರೆ. ಆದ್ರೆ ಔಷಧಿ ಕುಡಿಸಿದ ಬಳಿಕ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ಬಳಿಕ ಔಷಧಿಯನ್ನ ಪರೀಕ್ಷಿಸಿದಾಗ ಔಷಧಿ ಎಕ್ಸ್ ಪೈರ್ ಆಗಿರೋದು ಗೊತ್ತಾಗಿದೆ.ಮಗುವಿನ ಆರೋಗ್ಯದಲ್ಲಿ ಏರುಪೇರಾದ ನಂತರ ಪೋಷಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. Sign in to your account
Username or Email Address


Password

 Remember Me


