ಮೈಸೂರು: ಎರಡನೇ ಮದುವೆಗೆ ಪೋಷಕರು ಒಪ್ಪದ ಕಾರಣ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಮೈಸೂರಿನ ನಾಯ್ಡು ನಗರದಲ್ಲಿ ನಡೆದಿದೆ.ಮೆಲೀನಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೆಲೀನಾ ವಿವಾಹದ ನಂತರ ತಮ್ಮ ಪತಿಯನ್ನು ಕಳೆದುಕೊಂಡು ತವರು ಮನೆಯಲ್ಲಿಯೇ ವಾಸವಾಗಿದ್ದರು. ಮೆಲೀನಾ ನಗರದ ಎನ್.ಆರ್.ಮೊಹಲ್ಲಾದ 21 ವರ್ಷದ ರೋಷನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಮೆಲೀನಾ ಮನೆಯಲ್ಲಿ ರೋಷನ್ ಜೊತೆ ಮದುವೆ ಮಾಡಿಕೊಡುವಂತೆ ಕೇಳಿದ್ದರು. ಆದರೆ ಆತ ಮೆಲೀನಾಗಿಂತ 5 ವರ್ಷ ಚಿಕ್ಕವನಾದ ಕಾರಣ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ನೊಂದ ಮೆಲೀನಾ ನೇಣಿಗೆ ಕೊರಳೊಡ್ಡಿದ್ದಾರೆ.ಸಾವಿಗೂ ಮುನ್ನ ಮೆಲೀನಾ ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಸಂಬಂಧಿಕರ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಡೆತ್ ನೋಟ್ ಆಧರಿಸಿ ಮಮತಾ, ಲಿಲ್ಲಿ, ಮಲ್ಲಿಕಾ ಮತ್ತು ಇರ್ದುರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ರೋಷನ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. Sign in to your account
Username or Email Address


Password

 Remember Me


