ಬೆಂಗಳೂರು: ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಪಾಲಾಗಿರೋ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇದೀಗ ಆತ್ಮಕಥೆ ಬರೆಯಲು ಹೊರಟಿದ್ದಾರೆ.ಜೈಲಿನ ಜೀವನ ಕ್ರಮಕ್ಕೆ ಈಗಾಗಲೇ ಹೊಂದಿಕೊಂಡಿರುವ ಶಶಿಕಲಾ, ಆತ್ಮಕಥೆ ಬರೆಯಲು ಜೀವನದ ಪ್ರಮುಖ ಘಟ್ಟಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದಾರೆ. ಆಯಾ ಸ್ಥಾನದಿಂದ ಅಣ್ಣಾಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ ಶಶಿಕಲಾ, ಪುರಚ್ಚಿ ತಲೈವಿ ಜಯಲಲಿತಾ ಕುರಿತಂತೆ ರಹಸ್ಯಗಳನ್ನು ದಾಖಲಿಸಲಿದ್ದಾರೆ ಎನ್ನಲಾಗಿದೆ. ಶಶಿಕಲಾ ಜೊತೆ ಜೈಲಿನಲ್ಲಿರೋ ಆಕೆಯ ಸಂಬಂಧಿ ಇಳವರಸಿ ರಾಜಕೀಯ ಹಾಗೂ ಖಾಸಗಿ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನ ಶಶಿಕಲಾ ನೆನಪಿಸಿಕೊಳ್ಳಲು ಸಹಾಯ ಮಾಡ್ತಿದ್ದಾರೆ. ಇನ್ನು ಜಯಲಲಿತಾ ನಿಗೂಢ ಸಾವಿನ ಬಗ್ಗೆಯೂ ಈ ಆತ್ಮಕಥೆಯಲ್ಲಿ ಉಲ್ಲೇಖಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕು.ಪೆಬ್ರವರಿ 14ರಂದು ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಶಶಿಕಲಾಗೆ 4 ವರ್ಷ ಜೈಲು ಹಾಗೂ 10 ಕೋಟಿ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿತು. ಶಶಿಕಲಾ ಜೊತೆಗೆ ಇಳವರಸಿ ಹಾಗೂ ಸುಧಾಕರನ್ ಕೂಡ ದೋಷಿಗಳೆಂದು ಸಾಬೀತಾಗಿದ್ದು, ಅದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.Sign in to your account
Username or Email Address


Password

 Remember Me


