ಬೆಂಗಳೂರು: ಬ್ಲಾಕ್ ಪಲ್ಸರ್‍ನಲ್ಲಿ ಬಂದ ಇಬ್ಬರು ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಗೆ ಅಡ್ರೆಸ್ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ.ಸುಜಾತಾ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಇಂದು ಬೆಳಗಿನ ಜಾವ ಸುಮಾರು 6 ಗಂಟೆ ವೇಳೆಯಲ್ಲಿ ಸುಜಾತಾ ಅವರು ಮನೆಯ ಮುಂದೆ ರಂಗೋಲಿ ಹಾಕುವಾಗ ಬೈಕ್‍ನಲ್ಲಿ ಬಂದ ಇಬ್ಬರು ವಿಳಾಸ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕದಿಯಲು ಪ್ರಯತ್ನಿಸಿದ್ದಾರೆ. ಸುಜಾತ ಅವರು ಭಯದಿಂದ ಕಿರುಚಿದಾಗ ಸ್ಥಳೀಯರು ನೆರವಿಗೆ ಧಾವಿಸುತ್ತಿದ್ದಂತೆ ಕಳ್ಳರು ಕೇವಲ ಅರ್ಧದಷ್ಟು ಮಾತ್ರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಸುಮಾರು 15 ಗ್ರಾಂ. ಬಂಗಾರ ಕಳ್ಳತನವಾಗಿದೆ ಎಂದು ಸುಜಾತಾ ಅವರು ತಿಳಿಸಿದ್ದಾರೆ. ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. Sign in to your account
Username or Email Address


Password

 Remember Me


