ಬೆಂಗಳೂರು: ಮಾಸ್ತಿಗುಡಿ ದುರಂತದ ತಿಪ್ಪಗೊಂಡನಹಳ್ಳಿ ಈಗ ಭಯದ ಸ್ಥಳವಾಗಿ ಮಾರ್ಪಡಾಗಿದೆ. ಅನಿಲ್ ಹಾಗೂ ಉದಯ್ ಸಾವಿನ ಕ್ಷಣವನ್ನು ಕಣ್ಣಾರೆ ಕಂಡ ಊರಿನವರು ತಿಪ್ಪಗೊಂಡನಹಳ್ಳಿಯತ್ತ ಸುಳಿಯೋದಕ್ಕೂ ಭಯಪಡುತ್ತಿದ್ದಾರೆ.ಮಾಸ್ತಿಗುಡಿ ದುರಂತದ ಕಹಿ ನೆನಪು ಇನ್ನೂ ಕಣ್ಣಮುಂದಿದೆ. ಸಾವಿನ ಕೊನೆ ಕ್ಷಣವನ್ನು ಟಿವಿಯಲ್ಲಿ ಕಣ್ತುಂಬಿಕೊಂಡ ಜನ ಕೂಡ ಕಣ್ಣೀರು ಹಾಕಿದ್ರು. ಈ ಘೋರ ಘಟನೆಗೆ ಕಾರಣವಾದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಈಗ ಅಕ್ಷರಶಃ ಸ್ಮಶಾನ ಮೌನ. ವಿಚಿತ್ರ ಅಂದ್ರೆ ಊರಿನ ಜನ ಅನಿಲ್ ಉದಯ್ ದೆವ್ವವಾಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಆಗಾಗ ಸದ್ದು ಕೇಳುತ್ತದೆ ಅಂತಾ ಭಯ ಬಿದ್ದಿದ್ದಾರೆ. ತಿಪ್ಪಗೊಂಡನಹಳ್ಳಿ ಸುತ್ತಮುತ್ತದ ಊರಿನ ಜನ ಯಾರೂ ಜಲಾಶಯದತ್ತ ಸುಳಿಯುತ್ತಿಲ್ಲ. ಅಲ್ಲದೇ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಪಾರ್ಟಿಗಳು ಕೂಡ ಸಂಪೂರ್ಣ ಬಂದ್ ಆಗಿದೆ.ಈ ಹಿಂದೆ ಕುರಿ ಕಾಯುವವರು ಹಾಗೂ ದನ ಮೇಯಿಸೋಕೆ ಅಂತ ಜಲಾಶಯದ ಸುತ್ತಮುತ್ತ ಬರುತ್ತಿದ್ದ ಜನ ಈ ದುರ್ಘಟನೆಯ ಬಳಿಕ ಜಲಾಶಯದ ಬಳಿ ಬರೋದು ನಿಲ್ಲಿಸಿದ್ದಾರೆ ಅಂತಾರೆ ಮೀನುಗಾರರು. ತಿಪ್ಪಗೊಂಡನಹಳ್ಳಿ ಸುತ್ತಮುತ್ತಲಿನ ಊರಿನ ಜನ ಈ ದೆವ್ವದ ಕಥೆಗೆ ಭಯ ಬಿದ್ದು ಜಲಾಶಯದ ಬಳಿ ಸುಳಿಯೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದ್ರೆ ನಮಗೆ ಅಂತಹ ಅನುಭವವಾಗಿಲ್ಲ ಅನ್ನೋದು ಮೀನುಗಾರರ ಮಾತು.Sign in to your account
Username or Email Address


Password

 Remember Me


