ಬೆಂಗಳೂರು: ಸಚಿವರ ಕಾರು ತೊಳೆಯೋದಕ್ಕೆ, ಮನೆ ಗಾರ್ಡನ್‍ಗೆ ಶುದ್ಧವಾದ ಕಾವೇರಿ ನೀರು ಬೇಕು. ಆದ್ರೇ ಸಾಮಾನ್ಯ ಜನರ ಪಾಲಿಗೆ ಚರಂಡಿಯಲ್ಲಿ ಗಬ್ಬು ನಾರುವಂತ ನೀರು. ಈ ಬಗ್ಗೆ ದೂರು ಕೊಟ್ರೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.ಕಪ್ಪು ನೀಲಿ ಬಣ್ಣವಿರುವ ಕೆಟ್ಟ ವಾಸನೆಯ ನೀರಿನ ಮೇಲೆ ಪಾಚಿ ನೀರನ್ನು ಜಲಮಂಡಳಿ ಕಾವೇರಿ ನೀರು ಅಂತಾ ಪೂರೈಕೆ ಮಾಡುತ್ತಿದೆ. ಈ ಚರಂಡಿ ಮಿಶ್ರಿತ ಕಾವೇರಿ ನೀರು ಕುಡಿದು ಆಸ್ಪತ್ರೆಗೆ ಸೇರಿರೋದು ಕಲ್ಯಾಣ ನಗರದ ಜನ. ಕಳೆದೊಂದು ವಾರದಿಂದ ಈ ರೀತಿ ಚರಂಡಿ ಮಿಶ್ರಿತ ನೀರು ಬರ್ತಿದೆ. ಇಡೀ ಸಂಪ್‍ಗೆ ನೀರು ತುಂಬಿಸಿ ಜನ ಪ್ರತಿದಿನ ಲೀಟರ್‍ಗಟ್ಟಲೆ ನೀರನ್ನು ಮತ್ತೆ ಹೊರಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ಸಾಕಷ್ಟು ಜನ ಈ ನೀರು ಕುಡಿದು ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದು ವಾರದಿಂದಲೂ ಈ ಕಲುಷಿತ ನೀರು ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಅಂತ ಜನ ಆರೋಪಿಸಿದ್ದಾರೆ. ಸದ್ಯಕ್ಕೆ ಕಲ್ಯಾಣನಗರದ ಜನ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದ್ರೆ ಜಲಮಂಡಳಿ ಅಧಿಕಾರಿಗಳು ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ತೆಪ್ಪಗೆ ಕುಳಿತಿರುವುದು ಮಾತ್ರ ವಿಪರ್ಯಾಸ.Sign in to your account
Username or Email Address


Password

 Remember Me


