ರಾಯಚೂರು: ನವವಿವಾಹಿತೆಯನ್ನ ಅಪಹರಿಸಿರುವ ಪ್ರಕರಣ ಹಿನ್ನೆಲೆ ಯುವತಿ ಮನೆಯವರು ಆರೋಪಿ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಕರಡಚಿಲಮಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ.ಗ್ರಾಮದ ಹನುಮಂತ್ ಎಂಬ ಯುವಕ ಮದುವೆಯಾಗಿ 9 ದಿನಗಳ ಕಳೆದಿದ್ದ ನವವಿವಾಹಿತೆ ಸಿದ್ದಮ್ಮಳನ್ನ ಅಪಹರಿಸಿರುವ ಕುರಿತು ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಮೂರು ದಿನಗಳಿಂದ ಹನುಮಂತ ಹಾಗೂ ಯುವತಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಯುವತಿ ಮನೆಯವರು ಆಕ್ರೋಶಗೊಂಡು ಸುಮಾರು 8 ಜನರ ತಂಡದೊಂದಿಗೆ ಹನುಮಂತನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.ಘಟನೆಯಲ್ಲಿ ಹನುಮಂತನ ಕುಟುಂಬಸ್ಥರಾದ ಮಹಾಲಿಂಗರಾಯ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಲಿಂಗಮ್ಮ, ಸರಸ್ವತಿ ಎಂಬುವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆದಿದೆ. ತುರವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. Sign in to your account
Username or Email Address


Password

 Remember Me


