ಬೆಂಗಳೂರು: ಈ ಡೈರಿಗೂ ನನಗೂ ಸಂಬಂಧ ಇಲ್ಲ. ಡೈರಿಯ ಹೆಸರಿನಲ್ಲಿ ತೇಜೋವಧೆ ಮಾಡಲಾಗುತ್ತಿದ್ದು, ಇದು ಕಟ್ಟು ಕಥೆ ಎಂದು ಎಂಎಲ್‍ಸಿ ಗೋವಿಂದರಾಜ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.ತಮ್ಮ ಮನೆಯ ಮೇಲೆ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರಂಭದಲ್ಲೇ ನಾನು ಈ ಡೈರಿ ನನ್ನದಲ್ಲ ಎಂದು ಹೇಳಿದ್ದೇನೆ. ಅಷ್ಟೇ ಅಲ್ಲದೇ ಅದರಲ್ಲಿ ಬರಹ ನನ್ನದಲ್ಲ. ನಾನು ಡೈರಿ ಬರೆಯುವ ಅಭ್ಯಾಸವನ್ನು ಇಟ್ಟುಕೊಂಡಿಲ್ಲ ಎಂದು ಹೇಳಿದರು.ಈ ವೇಳೆ ಬಿಎಸ್ ಯಡಿಯೂರಪ್ಪನವರು ನಿಮ್ಮದೇ ಡೈರಿ ಎಂದು ಹೇಳುತ್ತಿದ್ದಾರಲ್ಲ ಎಂದು ಕೇಳಿದ್ದಕ್ಕೆ, ಈ ಬಗ್ಗೆ ನಾನು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇನೆ. ಇದಕ್ಕೆ ಸಂಬಂಧಿಸಿದ ವಿವರವನ್ನು ಶೀಘ್ರವೇ ತಿಳಿಸುತ್ತೇನೆ ಎಂದು ಹೇಳಿದರು.ಆದಾಯ ತೆರಿಗೆ ಇಲಾಖೆಯವರು ಮನೆಯಲ್ಲಿರುವ ವ್ಯಕ್ತಿಗಳ ಮುಂದೆಯೇ ವಸ್ತುಗಳನ್ನು ಜಪ್ತಿ ಮಾಡುತ್ತಾರೆ. ಅಷ್ಟೇ ಅಲ್ಲದೇ ಐಟಿ ಅವರು ಮಾಧ್ಯಮಗಳಿಗೆ ಡೈರಿಯೊಂದು ಸಿಕ್ಕಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ, ನೋಡಿ ನಾನು ಇಲ್ಲದ ಸಮಯದಲ್ಲಿ ದಾಳಿ ನಡೆದಿದೆ. ಇದೆಲ್ಲ ಕಟ್ಟುಕಥೆ, ಡೈರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಫೋನ್ ಕರೆಯನ್ನು ಕಡಿತಗೊಳಿಸಿದರು.Sign in to your account
Username or Email Address


Password

 Remember Me


