ಬೆಂಗಳೂರು: ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಯಲಾದ ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಲಿ ಅಂತಾ ಹೇಳಿದ್ದಾರೆ.ಸಿಎಂ ಸರ್ಕಾರ ವಿಸರ್ಜಿಸಿ, ಡೈರಿ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿ. ಸಚಿವರು ಮತ್ತು ಗೋವಿಂದ ರಾಜು ಹೇಳುತ್ತಿರೋದೆಲ್ಲಾ ಸುಳ್ಳು. ಸಚಿವರು ಮೂರ್ಖರ ರೀತಿಯಲ್ಲಿ ವರ್ತನೆ ಮಾಡ್ತಾ ಇದ್ದಾರೆ. ಈ ಕುರಿತಾಗಿ ಜನಾತಾ ನ್ಯಾಯಾಲಯದ ಮುಂದೆ ಹೋಗಿ ಹೋರಾಟ ಮಾಡೋಣ. ಅಂಗೈಯಲ್ಲಿರೋ ಹುಣ್ಣಿಗೆ ತನಿಖೆಯ ಅವಶ್ಯಕತೆ ಇಲ್ಲ. ಹೀಗಾಗಿ ಈ ಕ್ಷಣವೇ ರಾಜೀನಾಮೆ ಪತ್ರವನ್ನು ಬಿಸಾಡಲಿ ಅಂತಾ ಬಿಎಸ್ ವೈ ಕಿಡಿಕಾರಿದ್ದಾರೆ.Sign in to your account
Username or Email Address


Password

 Remember Me


