ಮಂಡ್ಯ: ಕೆಆರ್‍ಎಸ್ ಅಣೆಕಟ್ಟೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದ್ದು ಕುಡಿಯೋ ನೀರಿಗೂ ಆತಂಕ ಶುರುವಾಗಿದೆ. 124.80 ಅಡಿ ಗರಿಷ್ಟ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಈಗ ಕೇವಲ 78.30 ಅಡಿ ನೀರಿದೆ. ಅಂದ್ರೆ ಅಣೆಕಟ್ಟಿನಲ್ಲಿ ಕೇವಲ 10.5 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ.ಅದರಲ್ಲಿ 4.45 ಟಿಎಂಸಿ ಡೆಡ್ ಸ್ಟೋರೆಜ್ ಆಗಿದ್ದು ಸುಮಾರು 5.5 ಟಿಎಂಸಿ ನೀರನ್ನಷ್ಟೇ ಬಳಸಬಹುದಾಗಿದೆ. ಈಗಿರುವ ನೀರನ್ನ ಕೇವಲ ಕುಡಿಯೋ ನೀರಿಗಷ್ಟೇ ಬಳಕೆ ಮಾಡಲಾಗುತ್ತಿದ್ದು, ವ್ಯವಸಾಯಕ್ಕೆ ನೀರು ನೀಡುತ್ತಿಲ್ಲ. ಇದ್ರಿಂದ ರೈತರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರಿಗೆ ಏಪ್ರಿಲ್ ವರೆಗೆ ಹರಸಾಹಸ ಮಾಡಿ ಕುಡಿಯೋ ನೀರಿನ ಪೂರೈಕೆ ಮಾಡಬಹುದು. ಆ ನಂತ್ರವೂ ಮಳೆಯಾಗದಿದ್ರೆ ಕುಡಿಯೋ ನೀರಿಗೆ ಹಾಹಾಕಾರ ಶುರುವಾಗಲಿದೆ. ಒಂದು ವೇಳೆ ಅಣೆಕಟ್ಟೆಯಿಂದ ಡೆಡ್ ಸ್ಟೋರೇಜ್ ನೀರನ್ನು ತೆಗೆದಿದ್ದೆ ಆದ್ರೆ ಜಲಚರ ಜೀವಿಗಳಿಗೆ ತೊಂದರೆ ಎದುರಾಗಲಿದೆ. ಮಂಡ್ಯದ ಹಲವು ಹಳ್ಳಿಗಳಲ್ಲೂ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.ಕೆಆರ್‍ಎಸ್ ನೀರಿನ ಮಟ್ಟದ ವಿವರ ಇಂತಿದೆ:
ಗರಿಷ್ಟ 124.80 ಅಡಿ
ಇಂದಿನ ಮಟ್ಟ 78.30 ಅಡಿ
ಒಳ ಹರಿವು 105 ಕ್ಯೂಸೆಕ್
ಹೊರ ಹರಿವು 242 ಕ್ಯೂಸೆಕ್ Sign in to your account
Username or Email Address


Password

 Remember Me


