ಬೆಂಗಳೂರು: ನಾನು ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯನವರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದ ಬಿಎಸ್‍ವೈ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡೂರಾವ್ ಉಗಾಂಡದ ಸವಾರ್ಧಿಕಾರಿ ಇದಿ ಅಮೀನ್‍ಗೆ ಹೋಲಿಕೆ ಮಾಡಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕುತ್ತಿದ್ದ. ಈಗ ಯಡಿಯೂರಪ್ಪನವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಅನ್ನೋದು ಖಾತ್ರಿ ಆಗಿದೆ. ಈಗ ಬಿಎಸ್‍ವೈ ಇದಿ ಅಮೀನ್ ರೀತಿಯಂತೆ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದು, ವೈದ್ಯರ ಬಳಿ ಚೆಕ್ ಅಪ್ ಮಾಡಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದರು.ಈಗಲೇ ಜೈಲಿಗೆ ಹಾಕಲಿ: ಅಧಿಕಾರಕ್ಕೆ ಬಂದ 24 ಗಂಟೆಯ ಒಳಗಡೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ನ್ಯಾಯಾಧೀಶರೇ? ಬಿಎಸ್‍ವೈ ಮುಖ್ಯಮಂತ್ರಿ ಆಗುವವರೆಗೂ ಕಾಯುವುದು ಯಾಕೆ ಎಂದು ಪ್ರಶ್ನಿಸಿದ ಅವರು ಕೇಂದ್ರ ಸರಕಾರದ ಇಲಾಖೆಗಳನ್ನು ಬಳಸಿ ಸಿಎಂ ಸಚಿವರ ವಿರುದ್ಧ ದಾಖಲೆಗಳಿದ್ದರೆ ಈಗಲೇ ಸಿಬಿಐ ತನಿಖೆ ನಡೆಸಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.ಬಿಎಸ್‍ವೈ ಬಲಿಪಶು: ಯಡಿಯೂರಪ್ಪರನ್ನು ಬಿಜೆಪಿ ಗುಂಪು ಬಲಿಪಶು ಮಾಡುತ್ತಿದೆ. ಬಿಎಸ್‍ವೈ ವರ್ಚಸ್ಸು ಕುಗ್ಗಿಸಲು ಈ ತರಹ ಹೇಳಿಕೆಗಳನ್ನು ಉದ್ದೇಶಪೂರ್ವಕ ಮಾಡಿಸಲಾಗುತ್ತಿದೆ ಎಂದು ಗುಂಡೂರಾವ್ ಆರೋಪಿಸಿದರು.ಕಾನೂನು ಕ್ರಮ: ಐಟಿ ಅಧಿಕಾರಿಗಳು ತನಿಖೆಯ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆ. ಐಟಿ ದಾಖಲೆ ಸೋರಿಕೆಯಾದ ಬಗ್ಗೆ ನಮ್ಮಲ್ಲಿ ಆಧಾರ ಇದೆ. ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗ ಮಾಡುತ್ತಿದ್ದು, ಐಟಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡುತ್ತಿದೆ ಎಂದು ಅವರು ತಿಳಿಸಿದರು.ಹುಚ್ಚಾಟಗಳಿಗೆ ಉತ್ತರ: ಬಿಜೆಪಿಯ ಹುಚ್ಚಾಟಗಳಿಗೆ ಫೆಬ್ರವರಿ 23 ರಂದು ಕಾಂಗ್ರೆಸ್ ನಿಂದ ‘ಸತ್ಯಮೇವ ಜಯತೇ’ ರ್ಯಾಲಿ ಮಾಡುತ್ತೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಹೇಳಿದರು.Sign in to your account
Username or Email Address


Password

 Remember Me


