ಬೆಂಗಳೂರು:  ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಮಾಸುವ ಮುನ್ನವೇ ನಗರದ ಹೆಚ್ ಆರ್ ಬಿಆರ್ ಲೇಔಟ್ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.ಭಾನುವಾರ ರಾತ್ರಿ ಹೆಚ್ ಬಿಆರ್ ಲೇಔಟ್‍ನ 99 ದೋಸಾ ಹೋಟೆಲ್ ನಿಂದ ಊಟ ಮುಗಿಸಿದ ಯುವತಿ ತನ್ನ ಗೆಳೆಯ ಅನೀಶ್ ಜೊತೆ ನಡೆದುಕೊಂಡು ಬರುತ್ತಿದ್ದಾಗ ಎರಡು ಬೈಕಿನಲ್ಲಿ ಬಂದಂತಹ ಹೆಲ್ಮೆಟ್ ಧಾರಿ ದುಷ್ಕರ್ಮಿಗಳು ಗಗನಸಖಿಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.ಕೂಡಲೇ ಯುವತಿ ಕಿರಿಚಿಕೊಂಡಿದ್ದರಿಂದ ಬೈಕ್‍ನಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ ಆಕೆಯ ಸ್ನೇಹಿತ ಅನೀಶ್ ಕೂಡ ದುಷ್ಕರ್ಮಿಗಳನ್ನು ತಡೆದಿದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ. ಇನ್ನು ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


