ಕಲಬುರ್ಗಿ: ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆ ತಂದರೆ ಮಗಳ ಪಾಲಿಗೆ ಸೋದರ ಮಾವನೇ ವಿಲನ್ ಆದ ಹೀನಾಯ ಘಟನೆ ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.ಇದೀಗ ಕಲಬುರ್ಗಿ ನಗರದ ಹೊರವಲಯದ ಕೋಟನೂರ(ಡಿ) ಗ್ರಾಮದ ನಿವಾಸಿಯಾಗಿರುವ ತಾಯಿ ಶಾಂತಾಬಾಯಿ ತನ್ನ ಮಗಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. 15 ವರ್ಷಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮನೆಯ ಜವಾಬ್ದಾರಿಗಾಗಿ ಸಹೋದರ ವಿಜಯಕುಮಾರ್‍ಗೆ ಶಾಂತಾಬಾಯಿ ಮನೆಯಲ್ಲಿ ಆಶ್ರಯ ನೀಡಿದ್ದರು.ಆದರೆ ಕಾಮುಕ ವಿಜಯಕುಮಾರ್ ತನ್ನ ಮಗಳಿಗೆ ಸಮನಾದ 17 ವರ್ಷದ ಯುವತಿಯ ಮೇಲೆ ಶನಿವಾರ ರಾತ್ರಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಬಳಿಕ ಈ ವಿಷಯ ಜನರಿಗೆ ತಿಳಿದ್ರೆ ತೊಂದರೆ ಅಂತಾ ಪಕ್ಕದ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆರೋಪಿ ವಿಜಯಕುಮಾರ್ ಜೇಬಿನಲ್ಲಿ ಡೆತ್ ನೋಟ್ ಸಹ ಪೊಲೀಸರಿಗೆ ಪತ್ತೆಯಾಗಿದೆ. ಅದರಲ್ಲಿ ನಮ್ಮ ಸಾವಿಗೆ ಕಾರಣ ಮನೆಯ ಮಾಲೀಕ ಹಾಗು ಸೋದರನಾದ ಜಯರಾಜ್ ರಾಠೋಡ್ ಅಂತಾ ಬರೆಯಲಾಗಿದ್ದು, ಈ ಮೂಲಕ ಪ್ರಕರಣ ತಿರುವು ಪಡೆಯಲಿ ಅಂತಾ ಕಾಮುಕ ವಿಜಯಕುಮಾರ್ ಸಾಯುವ ಮುನ್ನ ಪ್ಲ್ಯಾನ್ ಮಾಡಿ ನೇಣಿಗೆ ಶರಣಾಗಿದ್ದಾನೆ.ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಉಂಡ ಮನೆಗೇ ಕನ್ನ ಬಗೆದ್ರು ಅಂತಾ ಹೇಳೋ ಮಾತು ಇಂತಹವರನ್ನೇ ನೋಡಿ ಹೇಳಿರಬೇಕು.Sign in to your account
Username or Email Address


Password

 Remember Me


