ಕಲಬುರಗಿ: ಬೈಕ್ ಅಪಘಾತದಲ್ಲಿ ರಸ್ತೆಯ ಮೇಲೆ ಬಿದ್ದು ಇಬ್ಬರು ಯುವಕರು ಚಿಕಿತ್ಸೆ ಜನರ ಬಳಿ ಅಂಗಲಾಚಿದ್ರೂ ಸಹಾಯಕ್ಕೆ ಬರದ ಘಟನೆ ಕಲಬುರಗಿ ನಗರದ ಹೊರವಲಯದ ಕೋಟನೂರ ಗ್ರಾಮದ ಬಳಿ ನಡೆದಿದೆ.ಇಂದು ಬೆಳಗ್ಗೆ 10.50ಕ್ಕೆ ಫಾರ್ಚೂನರ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅಲ್ಲಿನ ಸ್ಥಳೀಯರು 108 ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಯಾರು ಕೂಡ ಗಾಯಗೊಂಡವರ ಸಹಾಯಕ್ಕೆ ಮುಂದಾಗಿಲ್ಲ.ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಮಾನವೀಯತೆ ಮೆರೆದಿದ್ದು, ಗಾಯಾಳುಗಳ ಸಹಾಯಕ್ಕೆ ಮುಂದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಕಳುಹಿಸುವುದಿಲ್ಲ ಅಂದರೆ ನನ್ನ ವಾಹನದಲ್ಲಿ ಗಾಯಗೊಂಡವರನ್ನು ಕರೆದುಕೊಂಡು ಹೋಗುವುದಾಗಿ ಎಚ್ಚರಿಸಿದ ಬಳಿಕ ಸ್ಥಳಕ್ಕೆ ಅಂಬುಲೆನ್ಸ್ ಬಂದಿದೆ.ಅಂಬುಲೆನ್ಸ್ ಬರುವಷ್ಟರಲ್ಲೇ ನೀರು ಕುಡಿಸಿ ಗಾಯಾಳುಗಳ ಕಾಲನ್ನು ಶಾಲಿನಿಂದ ಕಟ್ಟಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.Sign in to your account
Username or Email Address


Password

 Remember Me


