ಹುಬ್ಬಳ್ಳಿ: ರಾಜ್ಯದಲ್ಲಿ ಅಪರೂಪದಲ್ಲೇ ಅಪರೂಪ ಎನ್ನುವಂತಹ ಘಟನೆಯೊಂದು ಧಾರವಾದ ಮನಗುಂಡಿ ಗ್ರಾಮದಲ್ಲಿ ನಡೆದಿದೆ. ಬಾಲಕನೊಬ್ಬ ಸತ್ತಿದ್ದಾನೆಂದು ತಿಳಿದು, ಇನ್ನೇನು ಆತನ ಮೃತದೇಹವನ್ನು ಸುಡಲು ರೆಡಿ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕ ಉಸಿರಾಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.ಹೌದು. ಜಿಲ್ಲೆಯ ಮನಗುಂಡಿ ಗ್ರಾಮದ ನಿಂಗಪ್ಪ ಅವರ ಪುತ್ರ ಕುಮಾರ್ ಎಂಬ ಬಾಲಕನಿಗೆ ಇತ್ತೀಚೆಗೆ ಬೀದಿ ನಾಯಿಗಳು ಕಚ್ಚಿದ್ದವು. ಇದರಿಂದ ಗಂಭೀರ ಗಾಯಗೊಂಡ ಕುಮಾರ್ ಮೂರ್ಛೆ ಹೋಗಿದ್ದನು. ಸ್ಥಳೀಯ ಎಸ್‍ಡಿಎಂ ಆಸ್ಪತ್ರೆಯಲ್ಲಿ 4 ದಿನ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಪ್ರಯೋಜನವಾಗಿರಲಿಲ್ಲ. 4 ದಿನಾದ್ರೂ ಚಿಕಿತ್ಸೆಗೆ ಸ್ಪಂದಿಸದೇ ಇರುವುದನ್ನು ಮನಗಂಡ ಕುಮಾರ್ ಪೋಷಕರು ಆತನ ಉಸಿರಾಟ, ನಾಡಿಮಿಡಿತ ನಿಂತಿತ್ತು ಅಂತಾ ಖಚಿತಪಡಿಸಿದ್ದರು. ಅಂತೆಯೇ ಆತನ ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ಸಶಾನಕ್ಕೆ ತಂದಿದ್ದರು. ಈ ವೇಳೆ ಬಾಲಕನ ದೇಹದಲ್ಲಿ ಚಲನವಲನ ಕಂಡು ಬಂದಿದ್ದು, ಬಾಲಕ ಉಸಿರಾಡುತ್ತಿರುವುದು ತಿಳಿದುಬಂತು.ಕೂಡಲೇ ಪೋಷಕರು ಆತನನ್ನು ಹುಬ್ಬಳ್ಳಿಯ ಸುಚಿತರಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಾವು ಗೆದ್ದ ಬಾಲಕ ಕುಮಾರ್‍ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.Sign in to your account
Username or Email Address


Password

 Remember Me


