ಬೆಂಗಳೂರು: ತಮಿಳುನಾಡಿನಲ್ಲಿ ಪಳನಿಸ್ವಾಮಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಇತ್ತ ಶಶಿಕಲಾರಲ್ಲಿ ಹೊಸ ಉತ್ಸಾಹ ಮೂಡಿಬಂದಿದ್ದು, ಬೆಂಗಳೂರು ಜೈಲಿಂದ ತಮಿಳುನಾಡಿನ ಜೈಲಿಗೆ ಶಿಫ್ಟ್ ಮಾಡಿಸಿಕೊಳ್ಳಲು ಹೊಸ ಸರ್ಕಾರ ರಣತಂತ್ರ ಹೂಡಿದೆ.ಶಶಿಕಲಾ ಪರವಾಗಿ ಕರ್ನಾಟಕ ಹೈಕೋರ್ಟ್‍ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲು ಕಸರತ್ತು ನಡೆದಿದೆ. ಮಧುಮೇಹ, ಮೊಣಕಾಲು ನೋವಿನ ಕಾರಣ ನೀಡಿ ಚೆನ್ನೈ ಅಥವಾ ವೇಲೂರು ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ.ಬೆಂಗಳೂರು ಜೈಲಿನಲ್ಲಿ ಯಾವುದೇ ವಿಐಪಿ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲು ತಯಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾರನ್ನು ಇಬ್ಬರು ವಕೀಲರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಣ್ಣಾಡಿಎಂಕೆ ಅಧಿನಾಯಕಿ ಶಶಿಕಲಾ, ಪಳನಿ ಸ್ವಾಮಿ ಸರ್ಕಾರದ ಈ ಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.Sign in to your account
Username or Email Address


Password

 Remember Me


