ಹಾವೇರಿ: ಸಾಲಬಾಧೆ ತಾಳಲಾರದೆ ಜಮೀನಿನಲ್ಲಿರೋ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಿಡಿದು ರೈತ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚಿಕ್ಕಾಂಸಿಹೊಸೂರು ಗ್ರಾಮದ ಬಳಿ ನಡೆದಿದೆ.ಮೃತ ರೈತನನ್ನ 60 ವರ್ಷ ವರ್ಷದ ಚಮನ್ ಸಾಬ ಅರಿಶಿನಗುಪ್ಪಿ ಎಂದು ಗುರುತಿಸಲಾಗಿದೆ.ಶಿರಗೋಡ ಗ್ರಾಮದ ನಿವಾಸಿಯಾಗಿರುವ ಚಮನ್ ಸಾಬ ಮೂರು ಎಕರೆ ಜಮೀನು ಹೊಂದಿದ್ದು ಬ್ಯಾಂಕ್ ಮತ್ತು ಕೈ ಸಾಲ ಅಂತಾ ನಾಲ್ಕೂವರೆ ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.ಬಿತ್ತನೆ ಮಾಡಿದ್ದ ಭತ್ತದ ಬೆಳೆ ಮಳೆ ಇಲ್ಲದೇ ಕೈಕೊಟ್ಟಿದ್ದರಿಂದ ಬೇಸತ್ತು ರೈತ ಚಿಕ್ಕಾಂಸಿಹೊಸೂರು ಗ್ರಾಮದ ಜಮೀನಿನಲ್ಲಿರೋ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬವೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


